ಶುಕ್ರವಾರ, ಫೆಬ್ರವರಿ 3, 2023
18 °C

ದುರ್ಗಾದೇವಿಗೆ ಹೂವಿನ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳಸ: ನವರಾತ್ರಿ ಪ್ರಯುಕ್ತ ಪ್ರತಿಷ್ಠಾಪಿಸಿರುವ ಇಲ್ಲಿನ ದುರ್ಗಾದೇವಿಗೆ ಸೋಮವಾರ ವೈಭವದಿಂದ ಹೂವಿನ ಪೂಜೆ ನೆರವೇರಿಸಲಾಯಿತು.

ದೇವಿಯ ಮಂಟಪ ಮತ್ತು ಸುತ್ತಮುತ್ತ ಆಕರ್ಷಕವಾಗಿ ಮಾಡಿರುವ ಹೂವಿನ ಅಲಂಕಾರ ಎಲ್ಲರ ಗಮನ ಸೆಳೆಯಿತು. ದೇವಿಯ ಪ್ರಭಾವಳಿ ಕೂಡ ವಿಶೇಷ ಅಲಂಕಾರದಿಂದ ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು.

ದುರ್ಗಾಪೂಜಾ ಸಮಿತಿಯ ಅಧ್ಯಕ್ಷ ರುದ್ರಯ್ಯ ಆಚಾರ್, ಕಾರ್ಯದರ್ಶಿ ನಿರ್ಮಲ್ ಕುಮಾರ್, ಪದಾಧಿಕಾರಿಗಳಾದ ಭರತ್‍ರಾಜ್, ರಾಮಚಂದ್ರ ಹೆಬ್ಬಾರ್, ಭಾಸ್ಕರ್, ಸತೀಶ್, ದಿನೇಶ್, ಉಮೇಶ್, ರಮೇಶ್, ರಾಜೇಶ್, ಮಂಜು, ಪ್ರಶಾಂತ್, ಗೋಪಾಲ್ ಇದ್ದರು. ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ವಿಜಯದಶಮಿ

ನರಸಿಂಹರಾಜಪುರ: ರಾಗ ಮಯೂರಿ ಅಕಾಡೆಮಿ ಆಶ್ರಯದಲ್ಲಿ ಇದೇ 4ರಂದು ಅಗ್ರಹಾರದ ಅನ್ನಪೂರ್ಣಮ್ಮ ರಂಗನಾಥ್ ರಾವ್ ಸಭಾಂಗಣದಲ್ಲಿ ವಿಜಯದಶಮಿ ಪೂಜೆ ಹಾಗೂ ಕಲಾಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.