ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಕ್ತರಿಗೆ ಆರೋಗ್ಯ ಸೇವೆ: ರಾಜಮೋಹನ್

ದೇರಳಕಟ್ಟೆಯ ಝುಲೇಖಾ ಯೆನೆಪೋಯ ಆಂಕಾಲಜಿ ಸಂಸ್ಥೆ
Last Updated 1 ಜನವರಿ 2023, 7:08 IST
ಅಕ್ಷರ ಗಾತ್ರ

ಉಳ್ಳಾಲ: ‘ಉತ್ತಮ ವೈದ್ಯರಾಗಬೇಕಾದಲ್ಲಿ ಮಾನವೀಯತೆ ಅಗತ್ಯ. ಮಾನವೀಯ ತತ್ವಗಳನ್ನು ಒಗ್ಗೂಡಿಸಿಕೊಂಡಿರುವ ಯೆನೆಪೋಯ ಸಂಸ್ಥೆಯು ಕೇರಳದ ಅನೇಕ ಅಶಕ್ತರಿಗೆ ಆರೋಗ್ಯ ಸೇವೆ ನೀಡುತ್ತಿದೆ’ ಎಂದು ಕಾಸರಗೋಡು ಸಂಸದ ಕೆ.ರಾಜಮೋಹನ್ ಉನ್ನಿತ್ತನ್ ಹೇಳಿದರು.

ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಟಾಟಾ ಸಂಸ್ಥೆಗಳ ಸಹಕಾರದೊಂದಿಗೆ ನಡೆಸಲ್ಪಡುವ ಝುಲೇಖಾ ಯೆನೆಪೋಯ ಆಂಕಾಲಜಿ ಸಂಸ್ಥೆಯಲ್ಲಿ ನ್ಯೂಕ್ಲಿಯರ್ ಮೆಡಿಸಿನ್ ಸೌಲಭ್ಯದ ಉನ್ನತೀಕರಣಗೊಂಡ ಸಲಕರಣೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಝುಲೇಖಾ ಕ್ಯಾನ್ಸರ್ ಆಸ್ಪತ್ರೆ ಮೂಲಕ ಇತಿಹಾಸ ನಿರ್ಮಿಸಿರುವ ಯೆನೆಪೋಯ ಸಂಸ್ಥೆ, ಇದೀಗ ನ್ಯೂಕ್ಲಿಯರ್ ಔಷಧೀಯ ಪದ್ಧತಿ ಉನ್ನತೀಕರಣದೊಂದಿಗೆ ಕ್ಯಾನ್ಸರ್ ರೋಗದ ತಡೆಗಟ್ಟುವಿಕೆ ಹಾಗೂ ರೋಗಿಗಳಿಗೆ ಉತ್ತಮ ಸೇವೆ ನೀಡಲು ಮುಂದಾಗಿದೆ ಎಂದು ಹೇಳಿದರು.

ಮಂಜೇಶ್ಚರ ಶಾಸಕ ಎ.ಕೆ.ಎಂ. ಅಶ್ರಫ್ ಮಾತನಾಡಿ, ‘ಝುಲೇಖಾ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಯಿಂದ ಕೇರಳದ ಅರ್ಧ ಭಾಗದ ಜನರಿಗೆ ಸಹಕಾರಿಯಾಗಿದೆ. ಕ್ಯಾನ್ಸರ್ ಬಾರದ ರೀತಿಯಲ್ಲಿ ತಡೆಗಟ್ಟುವ ಉದ್ದೇಶದಿಂದ ಎಲ್ಲಾ ರೀತಿಯ ಕ್ರಮಕ್ಕೆ ಯೆನೆಪೋಯ ಸಂಸ್ಥೆಯ ಜೊತೆಗೆ ಜನಪ್ರತಿನಿಧಿಗಳಾಗಿ ತಾವೆಲ್ಲರೂ ಕೈಜೋಡಿಸುತ್ತೇವೆ. ಕೇರಳದ ಮುಖ್ಯಮಂತ್ರಿ, ಆರೋಗ್ಯ ಮಂತ್ರಿಗಳಲ್ಲಿಯೂ ಚರ್ಚಿಸಿ ಸಂಸ್ಥೆಯ ಸವಲತ್ತು ಕೇರಳದುದ್ದಕ್ಕೂ ಸಿಗುವ ಪ್ರಯತ್ನವನ್ನು ಮಾಡುತ್ತೇವೆ’ ಎಂದರು.

ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಮಾತನಾಡಿ, ‘ಝುಲೇಖಾ ಆಸ್ಪತ್ರೆಯಿಂದಾಗಿ ದಕ್ಷಿಣ ಕರ್ನಾಟಕ, ಉತ್ತರ ಕೇರಳಕ್ಕೆ ಉತ್ತಮ ಆರೋಗ್ಯ ಸೇವೆ ಸಿಗುವಂತಾಗಿದೆ. ಅಶಕ್ತರಿಗೂ ಉನ್ನತ ಮಟ್ಟದ ಗುಣಮಟ್ಟದ ಆರೋಗ್ಯ ಸೇವೆ ಸಿಗಲು ಯೆನೆಪೋಯ ಸಂಸ್ಥೆ ಕಾರಣವಾಗಿದೆ’ ಎಂದರು.

ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಯೆನೆಪೋಯ ಪರಿಗಣಿತ ವಿ.ವಿಯ ಹಣಕಾಸು ವಿಭಾಗದ ಸಹ ಕುಲಾಧಿಪತಿ ಫರ್ಹಾದ್ ಯೆನೆಪೋಯ, ಯೆನೆಪೋಯ ವೈದ್ಯಕೀಯ ಕಾಲೇಜು ಡೀನ್ ಡಾ.ಎಂ.ಎಸ್ ಮೂಸಬ್ಬ, ಯೆನೆಪೋಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪ್ರಕಾಶ್ ಆರ್.ಎಂ ಸಲ್ದಾನ್ಹ ಉಪಸ್ಥಿತರಿದ್ದರು. ಡಾ.ಸೆಂಥಿಲ್ ನಾಥನ್ ಕ್ಯಾನ್ಸರ್ ಆಸ್ಪತ್ರೆಗೆ ಅಳವಡಿಸಿದ ಸಲಕರಣೆಗಳ ಮಾಹಿತಿ ನೀಡಿದರು.

‘ನ್ಯೂಕ್ಲಿಯರ್ ಮೆಡಿಸಿನ್ ಸೌಲಭ್ಯ’

ಸಂಸ್ಥೆಯಲ್ಲಿ ರೇಡಿಯೊ ಐಸೊಟೋಪ್‌ಗಳನ್ನು ಬಳಸಿಕೊಂಡು ಥೈರಾಯ್ಡ್, ಮೂತ್ರಪಿಂಡ, ಮೂಳೆ, ಹೃದಯ ಇತ್ಯಾದಿಗಳನ್ನು ಅಧ್ಯಯನ ಮಾಡಲು ಬಳಸಲಾಗುವ ಸ್ಪೆಕ್ಟ್ ಉಪಕರಣವನ್ನು ಸ್ಥಾಪಿಸಿದೆ. ಈ ಯಂತ್ರ ಶೀಘ್ರ ಕಾರ್ಯಾರಂಭ ಮಾಡಲಿದೆ. ನ್ಯೂಕ್ಲಿಯರ್ ಮೆಡಿಸಿನ್ ಸೌಲಭ್ಯವು ಕೆಲವು ಬಗೆಯ ಥೈರಾಯ್ಡ್ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಕಡಿಮೆ ಪ್ರಮಾಣದ ರೇಡಿಯೊ ಐಯೋಡಿನ್ ಚಿಕಿತ್ಸೆಯನ್ನು ಹೊಂದಿದೆ. ಮುಂದಿನ ಮೂರು ತಿಂಗಳ ಒಳಗೆ ವಿ.ವಿ.ಯು ಹೈಡೋಸ್ ರೇಡಿಯೊ ಐಯೋಡಿನ್ ಚಿಕಿತ್ಸೆಯನ್ನು ಸೇರಿಸಿ ನ್ಯೂಕ್ಲಿಯರ್ ಮೆಡಿಸಿನ್ ಕ್ಷೇತ್ರದಲ್ಲಿನ ಎಲ್ಲಾ ಅವಶ್ಯಕತೆಗಳಿಗೆ ಸಂಸ್ಥೆಯ ನ್ಯೂಕ್ಲಿಯರ್ ಮೆಡಿಸಿನ್ ವಿಭಾಗವನ್ನು ಸಂಪೂರ್ಣ ಏಕ ನಿಲುಗಡೆಯನ್ನಾಗಿಸಲು ಚಿಂತಿಸುತ್ತಿದೆ ಎಂದು ಕುಲಪತಿ ಡಾ.ಎಂ.ವಿಜಯಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT