ತಾ.ಪಂ. ಕಾಂಗ್ರೆಸ್ ಸದಸ್ಯರ ಆರೋಪ

ಕೊಪ್ಪ: ಕಳೆದ ಒಂದು ವರ್ಷದಿಂದ ತಾಲ್ಲೂಕು ತ್ರೈಮಾ ಸಿಕ ಅಭಿವೃದ್ಧಿ ಪರಿಶೀಲನ ಸಭೆ ನಡೆಸದೆ ಶಾಸಕ ಡಿ. ಎನ್.ಜೀವರಾಜ್ ಅಭಿವೃದ್ಧಿ ಕಾರ್ಯ ನಿರ್ಲಕ್ಷಿಸಿ ತಾಲ್ಲೂಕಿನ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ ಎಂದು ತಾ.ಪಂ.ನ ಕಾಂಗ್ರೆಸ್ ಸದಸ್ಯರು ಆರೋಪಿಸಿದರು.ತಾ.ಪಂ.ಅಧ್ಯಕ್ಷೆ ಸೀತಮ್ಮ ಅಧ್ಯಕ್ಷತೆಯಲ್ಲಿ ಬುಧ ವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಎಸ್.ಎಸ್.ಸಂಜಯ್ ಹಾಗೂ ಕೆ.ಬಿ.ಶಂಕರ್ ಮಾತನಾಡಿ, ಕಳೆದ ವರ್ಷದ ಫೆ. 23ರಂದು ನಡೆದ ಕೆಡಿಪಿ ಸಭೆ ನಂತರ ಈವರೆಗೆ ಸಭೆ ನಡೆದಿಲ್ಲ, ಕನಿಷ್ಠ ಮೂರು ತಿಂಗಳಿಗೊಮ್ಮೆ ಅಭಿವೃದ್ಧಿ ಪರಿಶೀಲನೆ ಸಭೆ ನಡೆಯಬೇಕು ಎಂದರು.

ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ಗಳಲ್ಲಿ ಶಿಕ್ಷಕರ ಕೊರತೆಯಿಂದ ಶಿಕ್ಷಣ ಗುಣಮಟ್ಟ ಕಡಿಮೆ ಯಾಗಿದೆ. ಕೂಡಲೇ ಹಂಗಾಮಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಆಗ್ರಹಿಸಿದರು.ಎಲ್ಲಾ ಅಂಗನವಾಡಿಗಳಿಗೆ ಅಡುಗೆ ಅನಿಲ ಸಿಲಿಂಡರ್ ಸರಬರಾಜು ಮಾಡಲು ಹಾಗೂ ಆರೋಗ್ಯ ರಕ್ಷಾ ಕವಚ 108ರ ಖರ್ಚು ವೆಚ್ಚದ ವಿವರ ನೀಡಲು ಒತ್ತಾಯಿಸಿದರು.

ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಬಯೋಮೆಟ್ರಿಕ್ ಪದ್ಧತಿ ಅಳವಡಿಸಲು ಸಭೆ ಸಮ್ಮತಿ ಸಿತು. ಸಮಾಜ ಕಲ್ಯಾಣಾಧಿಕಾರಿ ಲಕ್ಷ್ಮಣ್ ವಿದ್ಯಾರ್ಥಿ ನಿಲಯಗಳಲ್ಲಿ ಬಯೋಮೆಟ್ರಿಕ್ ಪದ್ಧತಿ ಅಳವಡಿಸುವ ಪ್ರಸ್ತಾವನೆ ಮಾಡಿದರು. ವಿದ್ಯಾರ್ಥಿಗಳ ಹಾಜರಾತಿ ಖಾತ್ರಿಗೆ ಬೆರಳಚ್ಚು ಪಡೆಯುವ ಈ ವಿಧಾನ ಉತ್ತಮವಾಗಿದ್ದು ಅಳವಡಿಕೆಗೆ ಯಾವುದೇ ಆಕ್ಷೇಪ ವಿಲ್ಲ ಎಂಬ ಅಭಿಪ್ರಾಯವ್ಯಕ್ತವಾಯಿತು.

ತಾಲ್ಲೂಕಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 22 ಗ್ರಾ.ಪಂ.ವ್ಯಾಪ್ತಿಯಲ್ಲಿ ರೂ.1.77 ಕೋಟಿ ವೆಚ್ಚದ ಕಾಮಗಾರಿ ಅನುಷ್ಠಾನಗೊಂಡಿದೆ. ರೂ. 2.19ಕೋಟಿ ಅನುದಾನ ಲಭ್ಯತೆ ಇದೆ ಎಂದು ಇ.ಓ.ತಿಪ್ಪೇಶ್ ತಿಳಿಸಿದರು. ಪರಿಶಿಷ್ಟ ಜಾತಿ ಜನರ ಸ್ವಸಹಾಯ ಸಂಘಗಳಿಗೆ ಸ್ವರ್ಣ ಜಂಯತಿ ರೋಜ್ಗಾರ್ ಯೋಜನೆಯಡಿ ತಲಾ ರೂ.1.25ಲಕ್ಷ ಸಹಾಯಧನ ಲಭ್ಯವಿದ್ದು ಗ್ರಾಮ ಪಂಚಾಯಿತಿಗೊಂದು ಸಂಘ ಸಹಾಯಧನ ಪಡೆದು ಕೊಳ್ಳಲು ಪ್ರೇರೆಪಿಸಬೇಕೆಂದು ತಿಪ್ಪೇಶ್ ತಿಳಿಸಿದರು. ಪ್ರಸಕ್ತ ಕೊಪ್ಪ ಗ್ರಾಮಾಂತರದ ವನಿತ, ಅಗಳಗಂಡಿಯ ಲಕ್ಷ್ಮಿ, ಶಕ್ತಿಗಳಪತಿ, ಬಂಡಿಗಡಿಯ ಲೋಕಪರಮೇ ಶ್ವರಿ, ಭುವನಕೋಟೆಯ ಮಂಜುಳ, ಬಿಂತ್ರವಳ್ಳಿಯ ಝಾನ್ಸಿ ಸ್ವಸಹಾಯ ಸಂಘಗಳು ಅನುದಾನ ಪಡೆದುಕೊಂಡಿವೆ ಎಂದು ತಿಳಿಸಿದರು.

ತಾ.ಪಂ.ನ ಡಿ. ದರ್ಜೆ ನೌಕರರ ವೇತನವನ್ನು ರೂ.1000 ಹೆಚ್ಚಳ ಮಾಡಲು ಸಭೆ ಸಮ್ಮತಿಸಿತು. ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ, ಸಂಚಾರಿ ಆರೋಗ್ಯ ಘಟಕ ಸ್ಥಾಪನೆಗೆ ಸಭೆ ಒತ್ತಾಯಿಸಿತು. ವಸತಿ ನಿಲಯಗಳ ಪೀಠೋಪಕರಣಗಳ ದುರಸ್ತಿಗೆ ಅನುಮೋದನೆ ನೀಡಲಾಯಿತು. ಉತ್ತಮೇಶ್ವರ ಜಾತ್ರಾ ಮೈದಾನದ ಮರಳು ತೆರವಿಗೆ ತಾ.ಪಂ. ಸದಸ್ಯ ಎಸ್.ಎಸ್.ಸಂಜಯ್ ಒತ್ತಾಯಿಸಿದರು.ಜಾತ್ರೆಯಲ್ಲಿ ಕೃಷಿ ಮೇಳ ನಡೆಸುವಂತೆ ಸದಸ್ಯ ಶಂಕರ್ ಸಲಹೆ ಮಾಡಿದರು. ಉಪಾಧ್ಯಕ್ಷ ಎಂ.ಪಿ.ಸಂತೋಷ್, ಸದಸ್ಯರಾದ ಪಾರ್ವತಿ, ಸುಮಾನಾಗೇಶ್, ಜಯಂತಿ, ನಾಗರತ್ನಮ್ಮ ಮತ್ತಿತರರು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.