ತರೀಕೆರೆ: ಲಕ್ಷ್ಮಣ್ ಅವರು ಹಿಂದುಳಿದ ವರ್ಗದ ಶಕ್ತಿಯಾಗಿದ್ದರು ಎಂದು ಕನಕ ಗುರುಪೀಠ, ಹೊಸದುರ್ಗ ಮಠದ ಈಶ್ವರಾನಂದ ಪುರಿ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಶಾರದಾ ಸಭಾಭವನದಲ್ಲಿ ಶುಕ್ರವಾರ ನಡೆದ ಸಹಕಾರಿ ಧುರಿಣ ಟಿ.ಎಚ್. ಲಕ್ಷ್ಮಣ್ ಒಂದು ನೆನಪು ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಹಣ ಮತ್ತು ಜಾತಿ ರಾಜಕಾರಣದಿಂದ ದೂರವಿದ್ದಾಗ ಮಾತ್ರ ವ್ಯಕ್ತಿ ಉನ್ನತ ಹಂತಕ್ಕೆ ಏರಲು ಸಾಧ್ಯ ಎಂದರು.

ಮ್ಯೋಮ್ಕೋಸ್ ಉಪಾಧ್ಯಕ್ಷ ನರಸಿಂಹನಾಯ್ಕ ಮಾತನಾಡಿ, ರೈತರ ಕಷ್ಟ ನಷ್ಟಗಳಿಗೆ ತಕ್ಷಣವೇ ಸ್ಪಂದಿಸುವ ಮನೋಧರ್ಮ ಲಕ್ಷ್ಮಣ್ ಅವರದ್ದಾಗಿತ್ತು ಎಂದು ತಿಳಿಸಿದರು.

ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ ರಾಜಕೀಯ ದೃಢತೆಯೊಂದಿಗೆ ಸಾಹಿತ್ಯ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಟಿ.ಎಚ್.ಲಕ್ಷ್ಮಣ್ ಕುರಿತ ಸ್ಮರಣ ಸಂಚಿಕೆ ಬಿಡುಗಡೆಮಾಡಲಾಯಿತು.

ಮಾಜಿ ಸಚಿವ ಎಚ್.ಆರ್. ರಾಜು, ಮಾಜಿ ಶಾಸಕರಾದ ಬಿ.ಆರ್. ನೀಲಕಂಠಪ್ಪ, ಎಸ್. ಎಂ. ನಾಗರಾಜ್ , ಟಿ.ಎಚ್. ಶಿವಶಂಕರಪ್ಪ, ಎಸ್.ಎಲ್. ಧರ್ಮೇಗೌಡ, ಮುಖಂಡರಾದ ಟಿ.ವಿ.ಶಿವಶಂಕರಪ್ಪ, ಟಿ.ಎನ್. ಗೋಪಿನಾಥ್, ಎನ್. ಮಂಜುನಾಥ, ಆರ್. ದೇವಾನಂದ್, ನಾಗಭೂಷಣ್, ಅನಂತನಾಡಿಗ್, ಶಿವಣ್ಣ, ತಿಪ್ಪೇರುದ್ರಪ್ಪ, ಟಿ.ಆರ್. ನಾಗರಾಜ್ , ಟಿ.ಎಚ್. ಲಕ್ಷ್ಮಣ್ ಪತ್ನಿ ಪಾರ್ವತಮ್ಮ, ಪುತ್ರ ಟಿ.ಎಲ್. ರಮೇಶ್, ಟಿ.ಎಲ್. ಪ್ರಕಾಶ್, ಟಿ.ಎಲ್. ಸುರೇಶ್, ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.