ಚಿಕ್ಕಮಗಳೂರು: ಜಲ್ಲೆಯಲ್ಲಿ 1,61, 295 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಗುರಿ ಹೊಂದಿದ್ದು, ಇದೇ 22ರವರೆಗೆ 37,492 ಹೆಕ್ಟೇರ್ನಲ್ಲಿ ಬಿತ್ತನೆಯಾಗಿ ಶೇ 23.2ರಷ್ಟು ಪ್ರಗತಿಯಾಗಿದೆ. ಕಳೆದ ವರ್ಷ ಜೂನ್ 16ಕ್ಕೆ ಶೇ 21.9ರಷ್ಟು ಬಿತ್ತನೆ ಯಾಗಿತ್ತು ಎಂದು ಕೃಷಿ ಅಧಿಕಾರಿ ಸುರೇಶ್ ತಿಳಿಸಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನಲ್ಲಿ 24,545 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಯಾಗಬೇಕಾಗಿದ್ದು, 5146 ಹೆಕ್ಟೇರ್ನಲ್ಲಿ ಬಿತ್ತನೆಯಾಗುವ ಮೂಲಕ ಶೇ 21ರಷ್ಟು ಸಾಧನೆಯಾಗಿದೆ. ತರೀಕೆರೆ ತಾಲ್ಲೂಕಿನಲ್ಲಿ 41,700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಬದಲಾಗಿ 5898 ಹೆಕ್ಟೇರ್ನಲ್ಲಿ ಬಿತ್ತನೆ ಪೂರ್ಣಗೊಂಡು ಶೇ 14.1ರಷ್ಟು ಪ್ರಗತಿ ಯಾದರೆ, ಕಡೂರು ತಾಲ್ಲೂಕಿನಲ್ಲಿ 69,250 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, 26448 ಹೆಕ್ಟೇರ್ ಬಿತ್ತನೆ ಮುಗಿದು ಶೇ 38.2ರಷ್ಟು ಪ್ರಗತಿ ಯಾಗಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ನರಸಿಂಹರಾಜಪುರ ತಾಲ್ಲೂಕಿ ನಲ್ಲಿ ಭತ್ತ ಬೆಳೆಯುವುದರಿಂದ ನಾಟಿ ಯಾಗದೆ ಯಾವುದೇ ಪ್ರಗತಿ ಯಾಗಿಲ್ಲ.

ವಾಣಿಜ್ಯ ಬೆಳೆಗಳನ್ನು 3310 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲು ಗುರಿ ಹೊಂದಿದ್ದು, 2669 ಹೆಕ್ಟೇರ್ನಲ್ಲಿ ಬಿತ್ತನೆ ಯಾಗಿ ಶೇ 80.6 ಪ್ರಗತಿಯಾಗಿದೆ. ಕಬ್ಬು ಕೂಳೆಯಲ್ಲಿ ಶೇ 100 ಪ್ರಗತಿಯಾಗಿದೆ. ಹತ್ತಿ 1760 ಹೆಕ್ಟೇರ್ ಬಿತ್ತನೆಯಾಗ ಬೇಕಾಗಿದ್ದು,1268 ಹೆಕ್ಟೇರ್ ಪ್ರದೇಶದಲ್ಲಿ ಇಲ್ಲಿಯವರೆಗೆ ಬಿತ್ತನೆಯಾಗಿ ಶೇ 72 ಪ್ರಗತಿಯಾಗಿದೆ.

ಎಣ್ಣೆಕಾಳು 21075 ಹೆಕ್ಟೇರ್ ಬಿತ್ತನೆ ಗುರಿ ನಿಗದಿಯಾಗಿದ್ದು, 13490 ಹೆಕ್ಟೇರ್ ಬಿತ್ತನೆ ಪೂರ್ಣಗೊಂಡಿದೆ. ಶೇ 64ರಷ್ಟು ಹರಳನ್ನು 850 ಹೆಕ್ಟೇರ್ನಲ್ಲಿ ಬಿತ್ತನೆಯಾಗಬೇಕಾಗಿದ್ದು, 285ಹೆಕ್ಟೇರ್ನಲ್ಲಿ ಬಿತ್ತನೆಯಾಗಿ ಶೇ 33.5 ಪ್ರಗತಿಯಾಗಿದೆ. ಸೂರ್ಯಕಾಂತಿ 5600ಹೆಕ್ಟೇರ್ ಬಿತ್ತನೆಯಾಗಬೇಕಾದಲ್ಲಿ 3640 ಹೆಕ್ಟೇರ್ ಬಿತ್ತನೆಯಾಗಿ ಶೇ 60.6 ಸಾಧನೆಯಾಗಿದೆ.

ಎಳ್ಳು 8 ಸಾವಿರ ಹೆಕ್ಟೇರ್ಗೆ ಬದಲಾಗಿ 6170 ಹೆಕ್ಟೇರ್ ಬಿತ್ತನೆ ಮುಗಿ ದಿದ್ದು, ಶೇ 77.1ರಷ್ಟು ಪ್ರಗತಿಯಾಗಿದೆ. ನೆಲಗಡಲೆ 5600 ಹೆಕ್ಟೇರ್ ಪ್ರದೇಶಕ್ಕೆ ಬದಲಾಗಿ 3640 ಹೆಕ್ಟೇರ್ ಬಿತ್ತನೆ ಮುಗಿದು, ಶೇ 65ರಷ್ಟು, ಹುರುಳಿ 13,760 ಹೆಕ್ಟೇರ್ನಲ್ಲಿ ಬಿತ್ತನೆಗೆ ಗುರಿ ನಿಗದಿಯಾಗಿ. 6233 ಹೆಕ್ಟೇರ್ನಲ್ಲಿ ಬಿತ್ತನೆ ಮುಗಿದು ಶೇ. 45.3 ಸಾಧನೆ ಯಾಗಿದೆ.

ಹೆಸರು 4345ಕ್ಕೆ 3938ಹೆಕ್ಟೇರ್ ಬಿತ್ತನೆಯಾಗಿ ಶೇ.96.6ರಷ್ಟು ಪ್ರಗತಿ ಸಾಧಿಸಲಾಗಿದೆ. ತೊಗರಿಯನ್ನು 850ಕ್ಕೆ ಬದಲಾಗಿ 685ಹೆಕ್ಟೇರ್ನಲ್ಲಿ ಬಿತ್ತಿದ್ದು, ಶೇ 80.6, ಅಲಸಂದೆಯನ್ನು 1100ಕ್ಕೆ 810ಹೆಕ್ಟೇರ್ನಲ್ಲಿ ಬಿತ್ತಿ ಶೇ 73.6 ಪ್ರಗತಿ, ಉದ್ದು 1050ಕ್ಕೆ 800ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಶೇ 76.2, ಮುಸುಕಿನ ಜೋಳ 32,100 ಹೆಕ್ಟೇರ್ ಬಿತ್ತನೆಯಾಗಬೇಕಾಗಿದ್ದು, 13990 ಹೆಕ್ಟೇರ್ ಬಿತ್ತನೆಯಾಗಿ ಶೇ 43.6 ಪ್ರಗತಿಯಾಗಿದೆ. ಜೋಳ 12590ಕ್ಕೆ 425ಹೆಕ್ಟೇರ್ನಲ್ಲಿ ಬಿತ್ತನೆಯಾಗಿ ಶೇ 34 ಪ್ರಗತಿಯಾಗಿದೆ ಎಂದು ವಿವರ ನೀಡಿದ್ದಾರೆ.

ರೈತರಿಗೆ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಭತ್ತ, ರಾಗಿ, ಜೋಳ, ಮುಸುಕಿನ ಜೋಳ ಹಾಗೂ ದ್ವಿದಳ ಧಾನ್ಯ ಬಿತ್ತನೆ ಬೀಜ ಸೇರಿದಂತೆ ಜಿಲ್ಲೆಯಲ್ಲಿ 10,980 ಕ್ವಿಂಟಲ್ ಬೇಡಿಕೆ ಇದ್ದು, ಈಗಾಗಲೇ 3151 ಕ್ವಿಂಟಲ್ ವಿತರಣೆ ಮಾಡಲಾಗಿದೆ. 5151.08 ಕ್ವಿಂಟಲ್ ದಾಸ್ತಾನು ಇಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.