ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ₹6 ಲಕ್ಷ ಮೌಲ್ಯದ 150 ಚೀಲ ಬೆಳ್ಳುಳ್ಳಿ ಕಳವು

Published 12 ಡಿಸೆಂಬರ್ 2023, 14:18 IST
Last Updated 12 ಡಿಸೆಂಬರ್ 2023, 14:18 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ದಂಡಿನಕುರುಬರಹಟ್ಟಿಯ ಗೋದಾಮಿನಲ್ಲಿ ಉದ್ಯಮಿಯೊಬ್ಬರು ಸಂಗ್ರಹಿಸಿಟ್ಟಿದ್ದ ₹ 6 ಲಕ್ಷ ಮೌಲ್ಯದ 150 ಚೀಲ ಬೆಳ್ಳುಳ್ಳಿ ಕಳವಾಗಿದೆ.

ರಾಜಲಕ್ಷ್ಮಿ ಕಂಪನಿಯ ಜಿ.ಎಂ.ಬಸವಕಿರಣ್‌ ಎಂಬುವರಿಗೆ ಸೇರಿದ ಬೆಳ್ಳುಳ್ಳಿ ಕಳುವಾಗಿವೆ. ಗೋದಾಮಿನ ಷಟರ್‌ ಮುರಿದು ಕೃತ್ಯ ಎಸಗಲಾಗಿದೆ. ಬೆಳ್ಳುಳ್ಳಿ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಈ ಕಳವು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉದ್ಯಮಿ ಬಸವಕಿರಣ್ ಅವರು 50 ಕೆ.ಜಿ. ತೂಕದ 1,100 ಚೀಲ ಬೆಳ್ಳುಳ್ಳಿಯನ್ನು ಮಧ್ಯಪ್ರದೇಶದಲ್ಲಿ ಖರೀದಿಸಿ ಚಿತ್ರದುರ್ಗಕ್ಕೆ ತಂದಿದ್ದರು. ದಂಡಿನಕುರುಬರಹಟ್ಟಿಯ ಜಯಶೀಲರೆಡ್ಡಿ ಎಂಬುವರ ಗೋದಾಮಿನಲ್ಲಿ ಐದು ತಿಂಗಳಿಂದ ಸಂಗ್ರಹಿಸಿಟ್ಟಿದ್ದರು. ಗೋದಾಮಿಗೆ ಭೇಟಿ ನೀಡಿದಾಗ ಷಟರ್‌ ಮುರಿದಿದ್ದು ಗೊತ್ತಾಗಿದೆ. ಚೀಲಗಳನ್ನು ಪರಿಶೀಲಿಸಿ ದೂರು ನೀಡಿದ್ದಾರೆ ಎಂದು ಗ್ರಾಮಾಂತರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT