ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಗಂಗಾ ಕೆರೆ ಏರಿಯಲ್ಲಿ ಬಿರುಕು

ತಾಲ್ಲೂಕಿನ ಅತಿದೊಡ್ಡ ಕೆರೆ: ದುರಸ್ತಿಗೆ ಆಗ್ರಹ
Last Updated 4 ನವೆಂಬರ್ 2022, 6:33 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಅತಿದೊಡ್ಡ ಕೆರೆಯಾದ ಶಿವಗಂಗಾ ಕೆರೆಯ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕಎದುರಾಗಿದೆ.

ಮೂರ್ನಾಲ್ಕು ದಿನಗಳ ಹಿಂದೆ ಕೆರೆಯ ಏರಿಯ ಮೇಲೆ ಉದ್ದನೆಯ ಬಿರುಕು ಉಂಟಾಗಿದ್ದು, ದಿನದಿಂದ ದಿನಕ್ಕೆ ಬಿರುಕು ಹೆಚ್ಚುತ್ತಿದೆ. ಈ ಕೆರೆ 1,702 ಎಕರೆ ವಿಸ್ತೀರ್ಣ ಹೊಂದಿದ್ದು, ತಾಲ್ಲೂಕಿನ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆ ಇದೆ. 36 ವರ್ಷದ ಬಳಿಕ ಈ ಕೆರೆ ತುಂಬಿ ಕೋಡಿ ಬಿದ್ದಿದ್ದು, ಏರಿಯಲ್ಲಿ ಬಿರುಕು ಮೂಡಿರುವುದರಿಂದ ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.

ಈ ಕೆರೆಯು ಕೊಂಡಾಪುರ, ಚಿತ್ರಹಳ್ಳಿ, ಕಾಶಿಪುರ, ಗೌರಿಪುರ, ಟಿ. ನುಲೇನೂರು, ತೊಡರನಾಳ್, ಮಹದೇವಪುರ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗಳ 1,551 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಕೆರೆಯು 256.65 ಮಿಲಿಯನ್ ಕ್ಯುಬಿಕ್ ಮೀಟರ್ (¼ ಟಿಎಂಸಿ) ನೀರಿನ ಸಾಮರ್ಥ್ಯ ಹೊಂದಿದ್ದು, ಒಂದು ಕಿ.ಮೀ. ಉದ್ದದ ಏರಿ ಹೊಂದಿದೆ. ಕೆರೆಗೆ ಎರಡು ಕೋಡಿಗಳಿದ್ದು, ಕೆರೆ ತುಂಬಿದ ನಂತರ ಎರಡೂ ಕೋಡಿಗಳನ್ನು ಎತ್ತರಿಸಲಾಗಿದೆ.

‘ಬಿರುಕು ಮತ್ತಷ್ಟು ಅಗಲ ಆಗುವ ಸಂಭವ ಇದೆ. ಏನಾದರೂ ಅನಾಹುತ ಆಗುವುದರ ಒಳಗೆ ಏರಿಯನ್ನು ದುರಸ್ತಿ ಮಾಡಬೇಕು’ ಎಂದು ಕೆರೆ ಅಚ್ಚಕಟ್ಟುದಾರರ ಸಮಿತಿಯ ಅಧ್ಯಕ್ಷ ಲೋಕೇಶ್, ಗ್ರಾಮ ಪಂಚಾಯಿತಿ ಸದಸ್ಯ ಎಸ್.ಪಿ.ಸತೀಶ್, ಎಂ.ಸಿ.ಸಿದ್ದೇಶ್, ಪ್ರವೀಣ್, ಮನುಗೌಡ, ಸಂದೀಪ್, ಅರುಣ್, ಅಜಯ್, ಗಿರೀಶ್ ಆಗ್ರಹಿಸಿದ್ದಾರೆ.

ಶೀಘ್ರವೇ ಕೆರೆ ಏರಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ವೆಂಕಟರಮಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT