ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಬಾಣಿ ಸಮುದಾಯದ ವಿಶಿಷ್ಟ ದೀಪಾವಳಿ

ತಾಂಡಾಗಳಲ್ಲಿ ಮನೆ ಮಾಡಿದ ಸಂಭ್ರಮ
Last Updated 7 ನವೆಂಬರ್ 2021, 4:21 IST
ಅಕ್ಷರ ಗಾತ್ರ

ಸಿರಿಗೆರೆ: ಸಿರಿಗೆರೆಗೆ ಸಮೀಪದ ಡಿ. ಮೆದಕರಿಪುರ ಹಾಗೂ ದೊಡ್ಡಿಗನಾಳು ಹೊಸಟ್ಟಿಯಲ್ಲಿ ಶುಕ್ರವಾರ ವಿಶಿಷ್ಟವಾಗಿ ದೀಪಾವಳಿ ಆಚರಿಸಲಾಯಿತು. ಲಂಬಾಣಿ ಜನಾಂಗದವರಿಗೆ ದೀಪಾವಳಿ ವಿಶಿಷ್ಟವಾಗಿದ್ದು, ತಾಂಡಾದಲ್ಲಿ ಸಂಭ್ರಮ ಮನೆ ಮಾಡಿತ್ತು.ಡಿ.ಮೆದಕೇರಿಪುರ ಗ್ರಾಮದಲ್ಲಿ ಲಂಬಾಣಿ ಸಮುದಾಯಕ್ಕೆ ಸೇರಿದ 300ಕ್ಕೂ ಹೆಚ್ಚು ಕುಟುಂಬಗಳಿವೆ. ದೀಪಾವಳಿಯನ್ನು ವಿಶೇಷವಾಗಿಆಚರಿಸುತ್ತಾರೆ.

‘ತಂಕಟೆ ಹೂ’ ತರುವ ಆಚರಣೆ ವಿಶಿಷ್ಟವಾಗಿದ್ದು, ರಂಗು-ರಂಗಿನ ಹೊಸ ಬಟ್ಟೆ ತೊಟ್ಟು ಅಲಂಕಾರ ಮಾಡಿಕೊಂಡ ಯುವತಿಯರು ಕೈಯಲ್ಲಿ
ಬಿದರಿನ ಬುಟ್ಟಿ ಹಿಡಿದು ಸಿಹಿ ತಿನ್ನುತ್ತಾ ಕಾಡಿಗೆ ತೆರಳಿ ಹೂವನ್ನುತಂದರು.

ಬೆಳಿಗ್ಗೆ ಕೋರು ಹುಡುಗಿಯರು (ಮದುವೆಯಾಗದ) ಸಾಂಪ್ರದಾಯಿಕ ಉಡುಗೆಯಾದ ಲಂಗ–ದಾವಣಿ ಧರಿಸಿ ಹೂವು ತರಲು ಹೋದರು.

ಬೆಳಿಗ್ಗೆ ಯುವತಿಯರು ಬಿದರಿನ ಬುಟ್ಟಿ ತುಂಬಾ ತಂಕಟೆ ತರಲು ಹೋಗಿ, ಸಂಜೆ ವೇಳೆಗೆ ಮನೆಗೆ ಹಿಂದಿರುಗುವುದು ಹಿರಿಯರ ಕಾಲದಿಂದ ನಡೆದು ಬಂದ ಪದ್ಧತಿ. ದೀಪಾವಳಿ ಹಬ್ಬಕ್ಕೆ ತಂಕಟೆ ಹೂವುಗಳೇ ಶ್ರೇಷ್ಠವಾಗಿರುವುದರಿಂದ ಪ್ರತಿ ಮನೆಯಲ್ಲಿ ಹುಡುಗಿಯರು ಹೂ ತರಲು ಹೋಗುತ್ತಾರೆ. ಹೂ ಕೀಳುವಾಗ ಎಲ್ಲರೂ ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾರೆ.

ಮದುವೆ ನಿಶ್ಚಯವಾದವರು, ವರಾನ್ವೇಷಣೆಯಲ್ಲಿ ತೊಡಗಿದವರು ಮತ್ತು ಮದುವೆ ನಂತರ ತವರಿನಲ್ಲಿ ನಡೆಯುವ ಇಂತಹ ಆಚರಣೆಯಲ್ಲಿ ಗೆಳತಿಯರ ಜತೆ ಸೇರುತ್ತೇವೆಯೋ ಇಲ್ಲವೋ ಎನ್ನುವ ಭಾವನೆ ನೆನಸಿಕೊಂಡು ಪರಸ್ಪರ ತಬ್ಬಿಕೊಂಡು ದುಃಖಿಸುತ್ತಾರೆ.

ತಂಕಟೆ ಹೂ ತರುವ ಆಚರಣೆಯಲ್ಲಿ ಗ್ರಾಮದ ಎಲ್ಲಾ ಯುವತಿಯರೂ ಭಾಗವಹಿಸುತ್ತಾರೆ. ಜಗಳವಾಡಿದ ಗೆಳತಿಯರೆಲ್ಲರೂ ಎಲ್ಲಾ ಒಂದಾಗುತ್ತಾರೆ.

ಹಿರಿಯರ ಹಬ್ಬ: ದೀಪಾವಳಿಯಲ್ಲಿ ಹಿರಿಯರ ಪೂಜೆಗೆ ಹೆಚ್ಚು ಮಹತ್ವ ಇದೆ. ಅಗಲಿದ ಹಿರಿಯರನ್ನು ಸ್ಮರಿಸಿ ಆಶೀರ್ವಾದ ಪಡೆಯುತ್ತಾರೆ. ಮನೆಯಲ್ಲಿ ಕೆಂಡ ತಯಾರಿಸಿ ಹಿರಿಯರನ್ನು ನೆನೆದು ಕುಂಡಕ್ಕೆ ಲೋಬಾನ, ತುಪ್ಪಹಾಕುತ್ತಾರೆ. ಅಕ್ಕಿಹಿಟ್ಟು ಮತ್ತು ಬೆಲ್ಲದಿಂದ ಮಾಡಿದ ಪದಾರ್ಥವನ್ನು ನೈವೇದ್ಯ ಮಾಡುತ್ತಾರೆ. ಈ ಪ್ರಸಾದವನ್ನು ‘ಧಬುಕಾರ್’, ಘೋಟಿಘಾಟಿ ಎಂದೂ ಕರೆಯುತ್ತಾರೆ.

ಕೊನೆಯಲ್ಲಿ ಗಾಳಿ, ಬೆಳಕು, ಚಂದ್ರ, ಸೂರ್ಯ, ಪ್ರಕೃತಿಗಳನ್ನು ನೆನೆದು ಹಿರಿಯರಿಗೆ ಪೂಜೆಸಲ್ಲಿಸುತ್ತಾರೆ.

ಯುವತಿಯರು ಗ್ರಾಮದ ಪ್ರತಿಮನೆಗೂ ತೆರಳಿ ದೀಪ ಬೆಳಗಿ ‘ಬಾಳು ಬೆಳಕಾಗಲಿ ಎಂದು ಹರಸುತ್ತಾರೆ. ಇದಕ್ಕೆ ಪ್ರತಿಯಾಗಿ ಹಿರಿಯರು ಯುವತಿಯರಿಗೆ ದಕ್ಷಿಣೆ ರೂಪದಲ್ಲಿ ಹಣ ನೀಡುತ್ತಾರೆ ಎಂದು ವಿ. ನಿರ್ಮಲಾ, ದಿಶಾ, ಸೋನಿಕಾ, ಮೋನಿಕಾ ತಿಳಿಸಿದರು.

ದೀಪಾವಳಿ ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಅದರಲ್ಲೂ ಮಹಿಳೆಯರು ಹಿರಿಯರನ್ನು ನೆನೆದು ಪೂಜಿಸುವುದು, ವೃದ್ಧರನ್ನು ಕಾಳಜಿಯಿಂದ ಕಾಣುವುದು, ನಮಿಸು
ವುದು ಮತ್ತು ಅವರಿಂದ ಆಶೀರ್ವಾದ ಪಡೆಯುತ್ತಾರೆ ಎಂದು ‌ಗ್ರಾಮದ ಬಿ. ರುದ್ರಾನಾಯ್ಕಹೇಳಿದರು.

ದೀಪಾವಳಿ ಹೆಣ್ಣು ಮಕ್ಕಳಿಗೆ ವಿಶೇಷವಾದ ಹಬ್ಬ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT