ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು ನಗರದಲ್ಲಿ ಕರಡಿ ಓಡಾಟ; ಆತಂಕ

Published 16 ಮಾರ್ಚ್ 2024, 14:33 IST
Last Updated 16 ಮಾರ್ಚ್ 2024, 14:33 IST
ಅಕ್ಷರ ಗಾತ್ರ

ಹಿರಿಯೂರು: ನಗರದ ಹುಳಿಯಾರು ರಸ್ತೆಯಲ್ಲಿರುವ ವಾಣಿವಿಲಾಸ ಬಲನಾಲೆಯ ಸಮೀಪ ಶುಕ್ರವಾರ ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಕರಡಿಯೊಂದು ಓಡಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ.

ಬೆಳಗ್ಗೆ ವಾಯು ವಿಹಾರಕ್ಕೆ ಹೋಗುವವರು, ಪತ್ರಿಕೆ ವಿತರಕರು, ಹಳ್ಳಿಗಳಿಂದ ಹಣ್ಣು–ಹೂವು–ತರಕಾರಿ ತರುವವರು, ಹಾಲು ವಿತರಕರು ಗಾಬರಿಗೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಯನ್ನು ತಕ್ಷಣ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಆತಂಕ ಬೇಡ: 

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಡಿಆರ್‌ಎಫ್‌ಒ ರವಿ, ‘ಮಾಹಿತಿ ತಿಳಿದ ತಕ್ಷಣ ಇಲಾಖೆ ಸಿಬ್ಬಂದಿ ಎಲ್ಲ ಕಡೆ ಪರೀಶಿಲನೆ ನಡೆಸಿದ್ದಾರೆ. ಎಲ್ಲಿಯೂ ಕರಡಿ ಕಂಡು ಬಂದಿಲ್ಲ. ಅದು ಅರಣ್ಯ ಪ್ರದೇಶದಲ್ಲಿ ಸೇರಿಕೊಂಡಿರುವ ಸಾಧ್ಯತೆ ಇದೆ. ಕರಡಿ ಓಡಾಡಿರುವ ಭಾಗ ಬಹುತೇಕ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಆಹಾರ ಹುಡುಕಿ ಬಂದಿರಬಹುದು. ಜನರು ಆತಂಕ ಪಡಬೇಕಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT