ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ರಾಜಕೀಯ ಚಟುವಟಿಕೆ ಬಿರುಸು

ನಗರಸಭೆಯಲ್ಲಿ 31 ಸದಸ್ಯರು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲು
Last Updated 11 ಅಕ್ಟೋಬರ್ 2020, 5:33 IST
ಅಕ್ಷರ ಗಾತ್ರ

ಚಳ್ಳಕೆರೆ: ಇಲ್ಲಿನ ನಗರಸಭೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮೂರು ಪಕ್ಷಗಳಲ್ಲಿ ರಾಜಕೀಯ ಗರಿಗೆದರಿದೆ.

ನಗರಸಭೆಯಲ್ಲಿ ಕಾಂಗ್ರೆಸ್ 16, ಜೆಡಿಎಸ್ 10, ಬಿಜೆಪಿ 4 ಹಾಗೂ ಒಂದು ಪಕ್ಷೇತರ ಸೇರಿ ಒಟ್ಟು 31 ಸದಸ್ಯರಿದ್ದಾರೆ.

ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರುವ ಕಾರಣ ಅಧ್ಯಕ್ಷರ ಗಾದಿಗೆ 15ನೇ ವಾರ್ಡ್‌ನ ಕಾಂಗ್ರೆಸ್‍ನ ಸದಸ್ಯೆ ಸಿ.ಬಿ. ಜಯಲಕ್ಷ್ಮೀ ಕೃಷ್ಣಮೂರ್ತಿ, 17ನೇ ವಾರ್ಡ್‌ನ ಸುಮಕ್ಕ ಅಂಜಿನಪ್ಪ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಸದಸ್ಯೆ ಸುಮಕ್ಕ ಅಂಜಿನಪ್ಪರವರ ಕಾಂಗ್ರೆಸ್‍ಗೆ ಹೊಸದಾಗಿ ಪ್ರವೇಶ ಪಡೆದಿದ್ದಾರೆ. ಆದ್ದರಿಂದ ಕಾಂಗ್ರೆಸ್‍ನ ಸಕ್ರಿಯ ಕಾರ್ಯಕರ್ತೆಯಾದ ಸದಸ್ಯೆ ಜಯಲಕ್ಷ್ಮೀ ಅವರಿಗೆ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್ ವಲಯದಲ್ಲಿ ಮಾತು ಕೇಳಿಬರುತ್ತಿದೆ.

ನಗರಸಭೆಯ ಮೊದಲ ಮಹಿಳಾ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಮಡಿಲಿಗೆ ಸೇರಲಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಿದೆ. 24ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಮಂಜುಳಾ ಆರ್. ಪ್ರಸನ್ನಕುಮಾರ್, 31ನೇ ವಾರ್ಡ್‌ನ ಜೈತುನ್‌ಬಿ ಮತ್ತು 1ನೇ ವಾರ್ಡ್ ಬಿಜೆಪಿ ಸದಸ್ಯೆ ಸಾಕಮ್ಮ ಸೇರಿ ಮೂವರು ಇದ್ದಾರೆ.

ಸರಳ ಬಹುಮತ ಹೊಂದಿರುವ ಕಾಂಗ್ರೆಸ್, ಅಧ್ಯಕ್ಷ ಸ್ಥಾನವನ್ನು ಇಟ್ಟುಕೊಂಡು ಉಪಾಧ್ಯಕ್ಷ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಡುವ ಲೆಕ್ಕಚಾರವೂ ನಡೆಯುತ್ತಿದೆ ಎನ್ನಲಾಗಿದೆ.

ಮೈತ್ರಿ ಆಡಳಿತದ ಬೇಡಿಕೆ; ಜೆಡಿಎಸ್‍ಗೆ ಉಪಾಧ್ಯಕ್ಷ ಸ್ಥಾನ?: ಶಾಸಕ ಟಿ. ರಘುಮೂರ್ತಿ ಅವರು ಸ್ಥಳೀಯ ಜೆಡಿಎಸ್ ವರಿಷ್ಠರಲ್ಲಿ ವಿಶ್ವಾಸ ಇರಿಸಿಕೊಂಡಿದ್ದಾರೆ. ಈಚೆಗೆ ನಡೆದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಅಧಿಕಾರದ ಹೊಂದಾಣಿಕೆ ಮಾಡಿಕೊಂಡು ಮೈತ್ರಿ ಆಡಳಿತ ತರಲು ಯಶಸ್ವಿಯಾಗಿದ್ದಾರೆ.

ಈ ವಿಶ್ವಾಸವನ್ನೇ ಬಳಸಿಕೊಂಡು ಜೆಡಿಎಸ್ ವರಿಷ್ಠರೊಂದಿಗೆ ಮಾತುಕತೆಗೆ ಮುಂದಾಗಿದ್ದು, ತಾಲ್ಲೂಕು ಪಂಚಾಯಿತಿ ಮಾದರಿಯಲ್ಲಿ ಮೈತ್ರಿ ಆಡಳಿತದ ಬೇಡಿಕೆಯನ್ನು ಕಾಂಗ್ರೆಸ್‍ನ ಮುಂದಿಟ್ಟು ಸಾಮಾನ್ಯ ಮಹಿಳೆಗೆ ಮೀಸಲಿರುವ ಉಪಾಧ್ಯಕ್ಷ ಸ್ಥಾನವನ್ನು 20ನೇ ವಾರ್ಡ್‌ನ ಸದಸ್ಯೆ ನಿರ್ಮಲ ಪ್ರಸನ್ನಕುಮಾರ್‌ ಅವರಿಗೆ ಕೊಡಿಸಲು ಪ್ರತ್ನಿಸುತ್ತಿದ್ದಾರೆ.

ಕಾಂಗ್ರೆಸ್ 16, ಜೆಡಿಎಸ್ 10, ಒಂದು ಪಕ್ಷೇತರ ಸೇರಿ ಒಟ್ಟು 27 ಸದಸ್ಯರ ಬಲದಿಂದ ಆಡಳಿತ ಚುಕ್ಕಾಣಿ ಹಿಡಿಯುವುದು ಸುಲ
ಭವಾಗುತ್ತದೆ. ಉಪಾಧ್ಯಕ್ಷ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟು ಶಾಸಕರು ಉದಾರತೆ ತೋರ
ಬಹುದು ಎಂಬ ಸುದ್ದಿ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT