ಚಿಕ್ಕಜಾಜೂರು: ಚಿಕ್ಕಜಾಜೂರು ಸಮೀಪದ ಹಿರೇಎಮ್ಮಿಗನೂರು ಗ್ರಾಮದಲ್ಲಿ ಬುಧವಾರ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ 50ಕ್ಕೂ ಹೆಚ್ಚು ಮಾವಿನ ಮರಗಳಿಗೆ ಹಾನಿಯಾಗಿದೆ.

ಗ್ರಾಮದ ಪಾರಕ್ಳರ ಪಿ.ಎಸ್. ಓಂಕಾರಪ್ಪ ಅವರ ಮಾವಿನ ತೋಟಕ್ಕೆ ಪಕ್ಕದ ಜಮೀನಿನ ಮೂಲಕ ಬೆಂಕಿ ಹರಡಿಕೊಂಡಿದೆ. ಮಾವಿನ ಮರಗಳ ಕೆಳಗೆ ಬೆಳೆದಿದ್ದ ಒಣ ಹುಲ್ಲು ಹಾಗೂ ಎಲೆಗಳಿಗೆ ಬೆಂಕಿ ತಗುಲಿದ್ದು, ಬೆಂಕಿಯ ಜ್ವಾಲೆಗೆ ಮರಗಳಲ್ಲಿದ್ದ ಹೂವು ಹಾಗೂ ಎಲೆಗಳು ಸುಟ್ಟು ಭಸ್ಮವಾಗಿದೆ.

‘ಈ ಬಾರಿ ಮರಗಳಲ್ಲಿ ಉತ್ತಮ ಹೂವು ಬಿಟ್ಟಿತ್ತು. ಹಾಗಾಗಿ ಹೆಚ್ಚು ಆದಾಯದ ನಿರೀಕ್ಷೆ ಇತ್ತು. ಆದರೆ, ಬೆಂಕಿ ದುರಂತದಿಂದಾ 50 ರಿಂದ 60 ಮರಗಳಲ್ಲಿದ್ದ ಹೂವು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಇಳುವರಿ ಸಂಪೂರ್ಣವಾಗಿ ಇಲ್ಲದಂತಾಗಿದೆ. ಅಂದಾಜು ₹ 50,000 ದಿಂದ ₹ 60,000 ನಷ್ಟವಾಗಿದೆ’ ಎಂದು ಅಳಲನ್ನು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.