ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸದುರ್ಗ | ರೇವಣಸಿದ್ಧೇಶ್ವರ ಗುರುಪೀಠಕ್ಕೆ ₹ 25 ಲಕ್ಷ ಅನುದಾನ

ದೇವಾಲಯ ನಿರ್ಮಾಣಕ್ಕೆ ನೆರವು: ಶಾಸಕ ಬಿ.ಜಿ. ಗೋವಿಂದಪ್ಪ
Published 7 ಜುಲೈ 2024, 16:03 IST
Last Updated 7 ಜುಲೈ 2024, 16:03 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಬಾಗೂರು ರೇವಣಸಿದ್ದೇಶ್ವರ ಸಿಂಹಾಸನ ಗುರುಪೀಠದ ನೂತನ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ₹ 25 ಲಕ್ಷ ಅನುದಾನ ನೀಡಲಾಗಿದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದರು.

ಸಮೀಪದ ಬಾಗೂರಿನಲ್ಲಿ ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಂಸ್ಥಾನ ಗುರುಪೀಠದ ನೂತನ ದೇವಸ್ಥಾನದ ಕಟ್ಟಡ ನಿರ್ಮಾಣ ಸಂಬಂಧ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಜಗದ್ಗುರು ರೇವಣಸಿದ್ದೇಶ್ವರ ಸಂಸ್ಥಾನದ 20ಕ್ಕೂ ಅಧಿಕ ಹಳ್ಳಿಯ ಭಕ್ತರು ಸೇರಿದಂತೆ ಒಕ್ಕಲುಗಳು ದೇಗುಲ ನಿರ್ಮಾಣಕ್ಕೆ ಎಲ್ಲರು ಸಂಘಟಿತರಾಗಿ ಕೈಜೋಡಿಸಬೇಕು. ತಾಲ್ಲೂಕಿನ ಎಲ್ಲ ಸಮುದಾಯಗಳಿಗೆ ಅನುದಾನ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

‘ಹಾಲುಮತದ ಸಂಪ್ರದಾಯ ಸಂಸ್ಕಾರದಂತೆ ಐತಿಹಾಸಿಕ ಗುರುಪೀಠಗಳ ನಿರ್ಮಾಣ ಮಾಡುವ ಮೂಲಕ ಸಮಾಜ ಮುಖಿಯಾದ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ಗುರುಪೀಠದ ಮಂಜಯ್ಯ ಒಡೆಯರ್ ಸಾನ್ನಿಧ್ಯ ವಹಿಸಿದ್ದರು. ರೇವಣಸಿದ್ದೇಶ್ವರ ಸಿಂಹಾಸನ ಸಂಬಂಧಿಸಿದ ಗುಡಿಕಟ್ಟಿನ ಎಲ್ಲ ವ್ಯಾಪ್ತಿಯ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT