ಚಿತ್ರದುರ್ಗ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿತ್ತು. ಚರ್ಚ್ಗಳು ಮತ್ತು ಮನೆಗಳಲ್ಲಿ ಶಾಂತಿಪ್ರಿಯನೆಂದೇ ಬಣ್ಣಿಸಲಾಗುವ ಏಸುಕ್ರಿಸ್ತನ ಜನ್ಮದಿನದ ಖುಷಿ ಹಬ್ಬಿತ್ತು.

ಬುಧವಾರ ರಾತ್ರಿ ಚರ್ಚ್ಗಳಲ್ಲಿ ನಡೆದ ವಿಶೇಷ ಪ್ರಾರ್ಥನೆಗಳಲ್ಲಿ ಪಾಲ್ಗೊಂಡ ಕ್ರೈಸ್ತರು ಹಾಗೂ ಏಸುವಿನ ಅಭಿಮಾನಿಗಳು ಗುರುವಾರ ಬೆಳಿಗ್ಗೆಯೂ ಶ್ರದ್ಧೆ ಮತ್ತು ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ವಿದ್ಯುತ್ ದೀಪಗಳಿಂದ ಅಲಂಕೃತವಾಗಿದ್ದ ಚರ್ಚ್ಗಳಲ್ಲಿ ಗೋದಲಿಗಳ ವೈವಿಧ್ಯಮಯ ಮಾದರಿಗಳನ್ನು ತಯಾರಿಸಿ ಇರಿಸಲಾಗಿತ್ತು. ಗೋದಲಿ, ಚರ್ಚ್ ಆವರಣ, ಮನೆಗಳ ಎದುರೂ ಹಾಗೂ ಅಂಗಡಿಗಳ ಮುಂದೆಯೂ ಮಿನುಗುತ್ತಿದ್ದ ‘ನಕ್ಷತ್ರಗಳ’ ಆಕಾರದ ಆಕಾಶ ಬುಟ್ಟಿಗಳ ಬೆಳಕು ಮುದ ನೀಡಿತು. ಜಿಲ್ಲೆಯ ನೂರಕ್ಕೂ ಅಧಿಕ ಚರ್ಚ್ಗಳಲ್ಲಿ ಹಬ್ಬದ ಸಡಗರ ಆವರಿಸಿತ್ತು.

ನಗರದ ಸೇಂಟ್ ಜೋಸೆಫ್ ಶಾಲೆ ಸಮೀಪದ ಹೋಲಿ ಫ್ಯಾಮಿಲಿ ಕ್ಯಾಥೋಲಿಕ್ ಚರ್ಚ್, ಫಿಲ್ಟರ್ಹೌಸ್ ರಸ್ತೆಯಲ್ಲಿರುವ ಪ್ರೊಟೆಸ್ಟಂಟ್ ಚರ್ಚ್ ಸಿಎಸ್ಐ ಪುನರುತ್ಥಾನ ದೇಗುಲ, ಕೆಳಗೋಟೆಯ ಹೋಲಿ ಫ್ಯಾಮಿಲಿ ಚರ್ಚ್, ಕಾಮನಬಾವಿ ಬಡಾವಣೆಯ ಆರೋಗ್ಯ ಮಾತೆ, ಡಾನ್ ಬೋಸ್ಕೊ, ಕೆಎಸ್ಎಫ್ಸಿ ಮುಂಭಾಗದ ಕ್ರಿಶ್ಚಿಯನ್ ವರ್ಷಿಪ್ ಚರ್ಚ್, ಸಿಎಸ್ಐ, ಸೆಂಟ್ ಜಾನ್ಸ್, ಫುಲ್ ಗಾಸ್ಪಲ್, ಹಳಿಯೂರಿನ ಬಾಲಏಸು, ಇಂಗಳದಾಳ್ನ ಕ್ಯಾಥೋಲಿಕ್ ಚರ್ಚ್, ರೆಹಬೋತ್, ಎಜಿ ಚರ್ಚ್, ಐಇಎಂ ಸೇರಿದಂತೆ ವಿವಿಧ ಚರ್ಚ್ಗಳಲ್ಲಿ ಪ್ರಾರ್ಥನೆ ನೆರವೇರಿತು.

ಚರ್ಚ್ಗಳಲ್ಲಿ ನಡೆದ ಪ್ರಾರ್ಥನೆಯಲ್ಲಿ ಮೊಳಗಿದ ‘ಕ್ಯಾರಲ್ಸ್’ ಭಕ್ತಿಭಾವನ್ನು ಇಮ್ಮಡಿಗೊಳಿಸಿದವು. ಕೆಂಪು ಉಡುಪು ತೊಟ್ಟುಕೊಂಡು ಬಿಳಿ ಗಡ್ಡ ಬಿಟ್ಟುಕೊಂಡಿದ್ದ ಸಾಂಟಾಕ್ಲಾಸ್ ವೇಷಧಾರಿಗಳು ಎಲ್ಲ ಕಡೆಗಳಲ್ಲೂ ‘ಜಿಂಗಲ್ ಬೆಲ್ಸ್’ ಹಾಡಿಗೆ ಕುಣಿದು ಇತರರನ್ನೂ ಕುಣಿಸಿದರು.

ಬಾಲಯೇಸು ಮೂರ್ತಿಯನ್ನು ಇಟ್ಟು ಸ್ತುತಿಗೀತೆ ಹಾಡಿ ಮೇಣದ ಬತ್ತಿ ಬೆಳಗಿ ಆರಾಧಿಸಿದರು. ಊಡುಗೊರೆ ರೂಪದಲ್ಲಿ ಆರ್ಥಿಕ ನೆರವು, ಬಟ್ಟೆ ಮತ್ತು ವಸ್ತುಗಳನ್ನು ನೀಡಿಯೂ ಕೆಲವರು ಹಬ್ಬವನ್ನು ಅರ್ಥಪೂರ್ಣಗೊಳಿಸಿದರು. ಬಹುತೇಕರು ಮನೆಯಲ್ಲಿಯೂ ಏಸುಕ್ರಿಸ್ತರಿಗೆ ನಮನ ಸಲ್ಲಿಸಿದರು. ವಿಶೇಷವಾಗಿ ಸಿಂಗರಿಸಿದ ಮಂಟಪದಲ್ಲಿ ಏಸು ಮೂರ್ತಿಯನ್ನು ಇರಿಸಿ ಆರಾಧಿಸಿದರು. ಚರ್ಚ್ಗಳಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕೇಕ್ಗೆ ವಿಶೇಷ ಬೇಡಿಕೆ

ಕ್ರಿಸ್ಮಸ್ ದಿನದಂದು ಪ್ಲಮ್ ಕೆಕ್ಗೆ ವಿಶೇಷ ಬೇಡಿಕೆ ಇತ್ತು. ಚರ್ಚ್ಗೆ ಭೇಟಿ ನೀಡಿದ ಬಳಿಕ ಕೆಕ್ ಕತ್ತರಿಸಿ ಸಂಭ್ರಮಿಸಿದರು. ಕ್ರೈಸ್ತ ಸಮುದಾಯದ ಕ್ಯಾಥೋಲಿಕ್ ಪಂಥದವರು ಏಸುಕ್ತಿಸ್ತನ ಆರಾಧಕರಾದರೇ ಪ್ರೊಟೆಸ್ಟೆಂಟ್ ಪಂಥದವರು ಮೇರಿ ಮಾತೆ ಪೂಜಿಸುತ್ತಾರೆ. ಈ ಎರಡು ಪಂಥದವರು ವಿಶೇಷ ರೀತಿಯಲ್ಲಿ ಕ್ರಿಸ್ಮಸ್ ಆಚರಿಸಿದರು. ಸಂಪ್ರದಾಯದಂತೆ ಕ್ಯಾಥೋಲಿಕ್ ಸಮುದಾಯದವರು ಚರ್ಚ್ಗಳಿಗೆ ಆಗಮಿಸಿ ಫಾದರ್ ನೇತೃತ್ತದಲ್ಲಿ ಪ್ರಾರ್ಥಿಸಿದರು. ಪ್ರೊಟೆಸ್ಟೆಂಟ್ ಸಮುದಾಯದವರು ಬೈಬಲ್ ಪಠಿಸುವ ಮೂಲಕ ಹಬ್ಬ ಆಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.