ಪಿಳ್ಳಕೇರನಹಳ್ಳಿ ಬಳಿಯಿರುವ ಕೊಳಚೆ ನೀರು ಶುದ್ಧೀಕರಣ ಘಟಕದ ಹೊರನೋಟ
ಬಾಪೂಜಿ ವಿದ್ಯಾಸಂಸ್ಥೆ ಹಿಂಭಾಗದಲ್ಲಿ ರಾಜಕಾಲುವೆ ಮೂಲಕ ಮಲ್ಲಾಪುರ ಕೆರೆ ಸೇರುತ್ತಿರುವ ಕೊಳಚೆ ನೀರು
ಚಳ್ಳಕೆರೆ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವುದು

ನಾನು ಇತ್ತೀಚೆಗಷ್ಟೇ ಎಸ್‌ಟಿಪಿ ಪರಿಶೀಲಿಸಿದ್ದೇನೆ. ನಗರದಲ್ಲಿ ಉತ್ಪತ್ತಿಯಾಗುವ ಎಲ್ಲಾ ಮಲಿನ ನೀರನ್ನು ಘಟಕಕ್ಕೆ ತಿರುಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು ಶೀಘ್ರ ಕಾರ್ಯರೂಪಕ್ಕೆ ಬರಲಿದೆ
ಟಿ. ವೆಂಕಟೇಶ್ ಜಿಲ್ಲಾಧಿಕಾರಿ 
ಕೊಳಚೆ ನೀರು ಹರಿಯಲು ಪೈಪ್‌ಲೈನ್ ಅಳವಡಿಸುವಂತೆ ಮನವಿ ಮಾಡಿದ್ದೇವೆ. ಆದರೂ ನಮ್ಮ ಬೇಡಿಕೆ ಈಡೇರಿಲ್ಲ. ಹಲವು ವರ್ಷಗಳಿಂದಲೂ ಕೊಳಚೆ ನೀರಿನಿಂದಾಗಿ ಹೈರಾಣಾಗಿದ್ದೇವೆ ಈಗಲಾದರೂ ಕೊಳಚೆ ನೀರಿನಿಂದ ನಮಗೆ ಮುಕ್ತಿ ಕೊಡಿ
ಮಂಜುನಾಥ್ ಸ್ಥಳೀಯರು
ಮಳೆ ಬಂದರೆ ಮಲ್ಲಾಪುರ ಕೆರೆ ಸಮೀಪದ ರಾಜಕಾಲುವೆ ಉಕ್ಕಿ ನಮ್ಮ ಮನೆ ಎದುರು ಕೊಳಚೆ ನೀರು ಬರುತ್ತದೆ. ಇದರಿಂದ ಮಕ್ಕಳಿಗೆ ವಿವಿಧ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ದುರ್ವಾಸನೆಯಿಂದ ಕಂಗಾಲಾಗಿದ್ದೇವೆ. ಯಾರೂ ನಮ್ಮ ಸಮಸ್ಯೆ ಕೇಳುತ್ತಿಲ್ಲ
ಕಣ್ಮಕ್ಕ ಸ್ಥಳೀಯರು