ಚಿತ್ರದುರ್ಗ ನಗರದಲ್ಲಿ ಕೊಳಚೆ ನೀರು ರಸ್ತೆಗೆ ಹರಿಯುವ ದೂರು ಬಂದ ಕೂಡಲೇ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಪೈಪ್‌ಲೈನ್ ಚೇಂಬರ್‌ಗಳು ಹಾಳಾಗಿದ್ದು ಶೀಘ್ರ ದುರಸ್ತಿ ಕಾರ್ಯ ನಡೆಸಿ ಸಮಸ್ಯೆ ಬಗೆಹರಿಸಲಾಗುತ್ತದೆ
ಎಸ್.ಲಕ್ಷ್ಮಿ ಪೌರಾಯುಕ್ತೆ ನಗರಸಭೆ
ಚಿತ್ರದುರ್ಗದಲ್ಲಿ ಮ್ಯಾನ್‌ಹೋಲ್‌ಗಳಿಂದ ಕೊಳಚೆ ನೀರು ರಸ್ತೆಗೆ ಹರಿಯುವುದು ಮಾಮೂಲಿಯಾಗಿದೆ. ಕೋಟೆ ಪ್ರೌಢಶಾಲೆ ಆವರಣದಲ್ಲಿ ಸಮಸ್ಯೆ ಗಂಭೀರವಾಗಿದೆ. ವಿದ್ಯಾರ್ಥಿಗಳು ದುರ್ವಾಸನೆಯಲ್ಲೇ ಆಟ ಆಡುವ ಸ್ಥಿತಿ ಬಂದಿದೆ
ಎ.ವಿ.ಮಂಜುನಾಥ್ ನಾಗರಿಕ
ನಾಯಕನಹಟ್ಟಿ ಪಟ್ಟಣದ 10ವಾರ್ಡ್‌ಗಳ ಚರಂಡಿ ನೀರನ್ನು ಶುದ್ಧಿಕರಣಗೊಳಿಸಿ ಜೈವಿಕ ಪರಿಸರವನ್ನು ರಕ್ಷಿಸುವ ಸಲುವಾಗಿ ತ್ಯಾಜ್ಯ ನೀರು ಸಂಸ್ಕರಣ ಘಟಕ ಯೋಜನೆ ರೂಪಿಸಿಲಾಗಿದೆ. ಕೆಲ ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ
ಓ.ಶ್ರೀನಿವಾಸ್ ಮುಖ್ಯಾಧಿಕಾರಿ
ಹೊಳಲ್ಕೆರೆ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸುಮಾರು ₹ 100 ಕೋಟಿ ಅನುದಾನ ಬೇಕು. ಇದಕ್ಕೆ ಕ್ರಿಯಾಯೋಜನೆ ರಚಿಸಿದ್ದು ಅನುದಾನ ಬಿಡುಗಡೆ ಆದ ನಂತರ ಯೋಜನೆ ಜಾರಿಗೊಳಿಸಲಾಗುತ್ತದೆ
ಡಿ.ಉಮೇಶ್ ಮುಖ್ಯಾಧಿಕಾರಿ ಪುರಸಭೆ
ಕೊಳಚೆ ನೀರು ಹಳ್ಳಕೊಳ್ಳ ಸೇರುತ್ತಿರುವುದರಿಂದ ನಾಯಕನಹಟ್ಟಿ ಪಟ್ಟಣದ ಜಲಮೂಲಗಳು ಕಲುಷಿತವಾಗುತ್ತಿವೆ. ಕೃಷಿ ಮತ್ತು ಜೈವಿಕ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶೀಘ್ರ ಒಳಚರಂಡಿ ವ್ಯವಸ್ಥೆ ಕಲ್ಪಿಸಿದರೆ ಸಮಸ್ಯೆ ಬಗೆಹರಿಯಲಿದೆ