ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಬಾರಿ ಕೋವಿಡ್ ಪ್ರಾಯೋಗಿಕ ಲಸಿಕೆ ಹಾಕಿಸಿಕೊಂಡ ಪಾಣಿ

Last Updated 29 ಸೆಪ್ಟೆಂಬರ್ 2020, 20:00 IST
ಅಕ್ಷರ ಗಾತ್ರ

ಹಿರಿಯೂರು: ನಗರದ ಕಾದಂಬರಿಕಾರ ಡಿ.ಸಿ.ಪಾಣಿ ಅವರ ದೇಹಕ್ಕೆ ಮಂಗಳವಾರ ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಎರಡನೇ ಬಾರಿಗೆ ಕೋವಿಡ್–19 ಪ್ರಾಯೋಗಿಕ ಲಸಿಕೆಯನ್ನು ಸೇರಿಸಲಾಗಿದೆ.

ಡಾ.ಅಜಯ್ ಅವರು ವಿಶೇಷ ಫಾರ್ಮಾಜೆಟ್ ಮಷಿನ್ ಮೂಲಕ ಪ್ರಾಯೋಗಿಕ ಲಸಿಕೆಯನ್ನು ದೇಹದೊಳಗೆ ಸೇರಿಸಿದರು.

‘ಆ.16ರಂದು ಮೊದಲ ಲಸಿಕೆ ಹಾಕಲಾಗಿತ್ತು. ಮೊದಲ ಹಂತದ ಲಸಿಕಾ ಪ್ರಯೋಗ ಯಶಸ್ವಿಯಾಗಿದೆ’ ಎಂದು ಜೀವನ್ ರೇಖಾ ಆಸ್ಪತ್ರೆ ನಿರ್ದೇಶಕ ಡಾ.ಅಮಿತ್ ಭಾತೆ ತಿಳಿಸಿದ್ದಾರೆ.

‘2–3 ತಿಂಗಳಲ್ಲಿ ಲಸಿಕೆ ಸಿದ್ಧವಾಗುವ ಎಲ್ಲ ಸಾಧ್ಯತೆಗಳಿವೆ. ಜನರನ್ನು ಭೀತಿಗೊಳಿಸಿರುವ ಕೋವಿಡ್–19 ಸಂಕಷ್ಟ ಬಹುಬೇಗ ಅಂತ್ಯ ಕಾಣಲಿದೆ’ ಎಂದು ‘ಪ್ರಜಾವಾಣಿ’ ಜತೆ ಮಾತನಾಡಿದ ಪಾಣಿ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT