ಸೋಮವಾರ, ನವೆಂಬರ್ 30, 2020
19 °C

ತೋಟದಲ್ಲಿ ವ್ಯಕ್ತಿ ಶವ: ಕೊಲೆ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಜಾಜೂರು: ಹನುಮನಕಟ್ಟೆ ಗ್ರಾಮದ ಸಮೀಪ ಶ್ರೀನಿವಾಸ ಎಂಬುವರ ಅಡಿಕೆ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಾಶೀಪುರ ಗ್ರಾಮದ ಬಸಪ್ಪ ಅಲಿಯಾಸ್‌ ಬಸವರಾಜಪ್ಪ (56) ಎಂಬುವರ ಶವ ಬುಧವಾರ ಪತ್ತೆಯಾಗಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಮಲಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಕುತ್ತಿಗೆಯಲ್ಲಿ ನೇಣು ಬಿಗಿದ ಗುರುತು ಕಂಡು ಬಂದಿದೆ. ಮೃತರ ಪತ್ನಿ ಚಂದ್ರಮ್ಮ ಹಾಗೂ ಮಗ ತಿಮ್ಮೇಶ್‌ ಅವರಿಂದ ಎಸ್ಪಿ ರಾಧಿಕಾ ಮಾಹಿತಿ ಪಡೆದರು.

ಚಿತ್ರಹಳ್ಳಿ ಪೊಲೀಸ್‌ ಠಾಣೆಯ ಪಿಎಸ್‌ಐ ಎಸ್‌.ಕೆ.ಮಂಜುನಾಥ ಹಾಗೂ ಸಿಬ್ಬಂದಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಮಹಾಲಿಂಗನಂದ ಗಾಂವಿ, ಡಿವೈಎಸ್ಪಿ ಪಾಂಡುರಂಗ, ಸಿಪಿಐ ಕೆ.ಎನ್‌.ರವೀಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿತ್ರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.