ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ವೈಜಿಗೆ ಟಿಕೆಟ್‌ ನೀಡಿದಾಗ ನಿರ್ಧಾರ ಪ್ರಕಟ: ಯೋಗೇಶ್ ಬಾಬು

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಬಿ. ಯೋಗೇಶ್ ಬಾಬು
Last Updated 2 ಏಪ್ರಿಲ್ 2023, 5:53 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ನಿಷ್ಠೆಯಿಂದ ಪಕ್ಷಕ್ಕೆ ದುಡಿದವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಟಿಕೆಟ್‌ ನೀಡುತ್ತದೆ. ಒಂದು ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿಜೆಪಿಯ ಎನ್‌.ವೈ. ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿ
ಸಲು ಅವಕಾಶ ನೀಡಿದರೆ ಅಂದೇ ನನ್ನ ನಿರ್ಧಾರ ಪ್ರಕಟಿಸುತ್ತೇನೆ’ ಎಂದು ಟಿಕೆಟ್‌ ಆಕಾಂಕ್ಷಿ ಬಿ.ಯೋಗೇಶ್ ಬಾಬು ಸ್ಪಷ್ಟಪಡಿಸಿದರು.

‘ಭಾರತ್‌ ಜೋಡೊ ಯಾತ್ರೆ ಸಭೆಯಲ್ಲಿ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಕಾರ್ಯಕರ್ತರ ಮುಂದೆ ನನ್ನ ಹಾಗೂ ಮಾಜಿ ಶಾಸಕ ಎಸ್‌.ತಿಪ್ಪೇಸ್ವಾಮಿ ಅವರ ಕೈಎತ್ತಿ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಒಮ್ಮತದಿಂದ ಕೆಲಸ ಮಾಡಿ ಗೆಲ್ಲಿಸಬೇಕು ಎಂದು ಘೋಷಣೆ ಮಾಡಿದ್ದರು. ಇದೀಗ ಎಸ್‌. ತಿಪ್ಪೇಸ್ವಾಮಿ ಅವರು ಪಕ್ಷ ತೊರೆದಿರುವುದರಿಂದ ನನಗೆ ಟಿಕೆಟ್‌ ನೀಡಲಿದ್ದಾರೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘15 ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷವನ್ನು ಹಂತ ಹಂತವಾಗಿ ಸಂಘಟನೆ ಮಾಡಿದ್ದೇನೆ. ಕಳೆದ ಚುನಾವಣೆಯಲ್ಲಿ ಪರಾಜಿತಗೊಂಡರೂ ನಿರಂತರವಾಗಿ ಮತದಾರರ ಸಂಕಷ್ಟಕ್ಕೆ ಸ್ಪಂದಿಸಿದ್ದೇನೆ. ನಮ್ಮ ಸಂಘಟನಾ ಶಕ್ತಿಯನ್ನು ಅರಿತ ಸಚಿವ ಬಿ.ಶ್ರೀರಾಮುಲು ಕ್ಷೇತ್ರದಿಂದ ಪಲಾಯಾನ ಮಾಡಿದರು’ ಎಂದು ವ್ಯಂಗ್ಯವಾಡಿದರು.

‘ಟಿಕೆಟ್‌ ನೀಡುವ ವಿಚಾರದಲ್ಲಿ ಯಾರಿಗೆ ಆದ್ಯತೆ ನೀಡಬೇಕು, ಯಾರಿಗೆ ನೀಡಬಾರದು ಎಂಬುದು ನಾಯಕರಿಗೆ ತಿಳಿದಿದೆ. ಕ್ಷೇತ್ರದ ಆಂತರಿಕ ವರದಿ ತರಿಸಿಕೊಂಡು ಟಿಕೆಟ್‌ ಕೊಡುವ ಭರವಸೆ ಕೊಟ್ಟಿದ್ದಾರೆ. ಆದರೆ ಕೆಲ ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಿಂದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಕಾಂಗ್ರೆಸ್‌ನಿಂದ ಟಿಕೆಟ್‌ ಖಚಿತವಾಗಿದ್ದು, ಘೋಷಣೆ ಬಾಕಿ ಉಳಿದಿದೆ’ ಎಂದರು.

‘ಕೊನೆ ಕ್ಷಣದಲ್ಲಿ ಆಕಾಂಕ್ಷಿಗಳಾದ ಎಲ್‌. ಸೋಮಣ್ಣ, ಡಾ.ಜಿ. ತಿಪ್ಪೇಸ್ವಾಮಿ ಅವರಿಗೆ ಟಿಕೆಟ್‌ ನೀಡಿದರೂ ಬೇಸರ
ವಿಲ್ಲ. ಚುನಾವಣೆ ಸಮಯದಲ್ಲಿ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಬಾರದು. ಪಕ್ಷಕ್ಕೆ ದುಡಿದವರಿಗೆ ಆದ್ಯತೆ ನೀಡಬೇಕು. ಬೆಂಬಲಿಗರು ಗೊಂದಲಕ್ಕೆ ಒಳಗಾಗಿ ಸಿದ್ದರಾಮಯ್ಯ ಅವರ ಬೆಂಗಳೂರು ನಿವಾಸದ ಎದುರು ಪ್ರತಿಭಟನೆ ನಡೆಸಿ ತಪ್ಪು ಮಾಡಿದ್ದಾರೆ’ ಎಂದು ಬೇಸರಿಸಿದರು.

ಆಕಾಂಕ್ಷಿಗಳಾದ ಡಾ.ಜಿ. ತಿಪ್ಪೇಸ್ವಾಮಿ, ಎಲ್‌. ಸೋಮಣ್ಣ, ಮುಖಂಡರಾದ ಅಂಜಿನಪ್ಪ, ನಾಗೇಶ್‌ ರೆಡ್ಡಿ, ಜಯಣ್ಣ, ಪಾಪಣ್ಣ, ಜಗದೀಶ್‌, ಅಶೋಕ್‌ ನಾಯ್ಡು, ಸಂಪತ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT