ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡುಗಾಡು ಸಿದ್ದರಿಗೆ ಅಗತ್ಯ ವಸ್ತು ವಿತರಣೆ

Last Updated 2 ಏಪ್ರಿಲ್ 2020, 9:17 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಚಿತ್ರಹಳ್ಳಿ ಗೇಟ್ ಹಾಗೂ ರಾಮಗಿರಿಯಲ್ಲಿರುವ ಸುಡುಗಾಡು ಸಿದ್ದರಿಗೆ ಬುಧವಾರ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

‘ಪ್ರಜಾವಾಣಿ’ಯಲ್ಲಿ ಬುಧವಾರ ‘ತುತ್ತು ಅನ್ನಕ್ಕೂ ಸುಡುಗಾಡು ಸಿದ್ದರ ತತ್ವಾರ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಹಾಗೂ ಸಂಘ ಸಂಸ್ಥೆಗಳು ಜನರ ನೆರವಿಗೆ ಧಾವಿಸಿದವು.

ಚಿತ್ರಹಳ್ಳಿ ಗೇಟ್‌ನಲ್ಲಿರುವ ಕಾಲೊನಿಗೆ
ಭೇಟಿ ನೀಡಿದ ತಹಶೀಲ್ದಾರ್ ಕೆ. ನಾಗರಾಜ್, ಗ್ರಾಮ ಪಂಚಾಯಿತಿ ಸಿಬ್ಬಂದಿ, ಅಧಿಕಾರಿಗಳು ಜನರಿಗೆ ದವಸ– ಧಾನ್ಯ, ಅಗತ್ಯ ವಸ್ತುಗಳನ್ನು ವಿತರಿಸಿದರು.

ಅಲೆಮಾರಿಗಳ ಸಮಸ್ಯೆ ಆಲಿಸಿದ ಅಲೆಮಾರಿ ಬುಡಕಟ್ಟು ಮಹಾ ಸಭಾದ ರಾಜ್ಯ ಸಮಿತಿ ಸದಸ್ಯರಾದ ಚಿತ್ರದುರ್ಗದ ಸಚಿನ್ ಹಾಗೂ ಎಚ್.ಡಿ.ಪುರದ ಜಯಶೀಲಾ ವಿಜಯ್ ಚಿತ್ರಹಳ್ಳಿ,‘ಈಗಾಗಲೇ ತಾಲ್ಲೂಕು ಹಾಗೂ ಜಿಲ್ಲಾಡಳಿತಗಳಿಂದ ನೆರವು ನೀಡಲಾಗಿದೆ. ಮುಂದೆಯೂ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದರು.

ರಾಮಗಿರಿಯ ಕಾಲೊನಿಯ 60 ಕುಟುಂಬಗಳಿಗೆ ಪಟ್ಟಣದ ಪ್ರಸನ್ನ ಗಣಪತಿ ಟ್ರಸ್ಟ್‌ನಿಂದ ಅಕ್ಕಿ, ಬೇಳೆ, ಸಕ್ಕರೆ, ಗೋಧಿಹಿಟ್ಟು, ಕಾಫಿಪುಡಿ, ಸಾಂಬರ್ ಪುಡಿ, ಕಾರದಪುಡಿ, ಅರಿಶಿಣ ಪುಡಿ, ಪೇಸ್ಟ್ ಮತ್ತಿತರ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

ಪ್ರಸನ್ನ ಗಣಪತಿ ದೇವಸ್ಥಾನ ಟ್ರಸ್ಟ್‌ನ ನಟರಾಜ್ ಆಚಾರ್, ಎಚ್.ಸಿ.ರಮೇಶ್. ವಿ.ನಟರಾಜ್, ರಾಘವೇಂದ್ರ ನಾಯಕ, ಬಿ.ಎನ್. ಪ್ರಶಾಂತ್ ಕುಮಾರ್, ಎಸ್. ವೇದಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT