ಶುಕ್ರವಾರ, ಅಕ್ಟೋಬರ್ 30, 2020
20 °C

ದೇವಸಮದ್ರ: ಮನೆಗಳಿಗೆ ನುಗ್ಗಿದ ಕೆರೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ತಾಲ್ಲೂಕಿನ ದೇವಸಮುದ್ರದಲ್ಲಿ ಬುಧವಾರ ಕೆರೆ ಕೋಡಿ ಬಿದ್ದಿದ್ದು, ನೀರು ಗ್ರಾಮಕ್ಕೆ ನುಗ್ಗಿದೆ. 

15 ದಿನಗಳ ಹಿಂದೆ ಕೆರೆ ತುಂಬಿ ಕೋಡಿ ಹರಿಯಲು ಆರಂಭವಾಗಿತ್ತು. ಈ ನೀರು ಕಾಲುವೆ ಮೂಲಕ ವೆಂಕಟಾಪುರ, ವಿಠಲಾಪುರ ಮಾರ್ಗವಾಗಿ ಚಿನ್ನಹಗರಿಗೆ ಹರಿಯುತ್ತಿತ್ತು. ಆದರೆ, ಈಚೆಗೆ ಕಾಲುವೆಯಲ್ಲಿ ಮುಳ್ಳುಗಂಟಿ, ಗಿಡಗಳು ಬೆಳೆದು ಹೂಳು ತುಂಬಿಕೊಂಡಿರುವ ಕಾರಣ ನೀರು ಗ್ರಾಮದ ಒಳಗಡೆ ನುಗ್ಗಿದೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ಮಂಡಲಾಧ್ಯಕ್ಷ ಜೀರಹಳ್ಳಿ ತಿಪ್ಪೇಸ್ವಾಮಿ ತಿಳಿಸಿದರು.

ರಾಂಪುರ ಭಾಗದಿಂದ ಗುಂಡೇರು ಹಳ್ಳಕ್ಕೆ ಬರುವ ನೀರನ್ನು ದೇವಸಮದ್ರ ಕೆರೆಗೆ ಕಾಲುವೆ ಮೂಲಕ ತಿರುಗಿಸಿ ಕೆರೆ ತುಂಬಿಸಿಕೊಳ್ಳಲಾಗುತ್ತಿತ್ತು. ಈಗ ಕೆರೆ ತುಂಬಿರುವ ಕಾರಣ ಮಾರ್ಗವನ್ನು ಬಂದ್ ಮಾಡಲಾಗಿತ್ತು. ಬುಧವಾರ ರಾತ್ರಿ ಮತ್ತೆ ಕೆಲವರು ಕೆರೆ ಕಡೆ ನೀರು ಹರಿಯುವಂತೆ ಮಾಡಿದ್ದು ಗ್ರಾಮಕ್ಕೆ ನೀರು ನುಗ್ಗಲು ಕಾರಣವಾಗಿದೆ. ಘಟನೆಯಲ್ಲಿ ಎಸ್‌ಸಿ ಕಾಲೊನಿ ಸೇರಿ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಗ್ರಾಮದ ಒಳಗೆ ಎರಡು ಅಡಿ ಎತ್ತರದಷ್ಟು ನೀರು ನಿಂತುಕೊಂಡಿತ್ತು ಎಂದು ಗ್ರಾಮಸ್ಥರು ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಮಲ್ಲಿಕಾರ್ಜುನ್, ‘ಬಸಾಪುರ ಬಳಿ ಗೇಟ್ ಎತ್ತಿದ್ದ ಕಾರಣ ನೀರು ದೇವಸಮುದ್ರ ಕೆರೆ ಕಡೆ ಹರಿದಿದೆ. ಸಂಜೆ ಗೇಟ್ ಬಂದ್ ಮಾಡಿಸಲಾಗಿದ್ದು, ನೀರು ಹರಿಯದಂತೆ ಮಣ್ಣು ಹಾಕಿಸಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು