ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಭೀಕರ ಬರಗಾಲಕ್ಕೆ ಪರಿಸರ ನಾಶ ಕಾರಣ’

Published 5 ಜೂನ್ 2024, 15:54 IST
Last Updated 5 ಜೂನ್ 2024, 15:54 IST
ಅಕ್ಷರ ಗಾತ್ರ

ಧರ್ಮಪುರ: ಮನುಷ್ಯ ದುರಾಸೆಗೆ ಒಳಗಾಗಿ ಸುತ್ತಮುತ್ತಲಿನ ಗಿಡ ಮರಗಳನ್ನು ಕಡಿಯುವುದರ ಮೂಲಕ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಇದರಿಂದ ನಾವು ಕಳೆದ ವರ್ಷ ಭೀಕರ ಬರಗಾಲಕ್ಕೆ ತುತ್ತಾಗಬೇಕಾಯಿತು ಎಂದು ಸಿಪಿಐ ಷಣ್ಮುಖಪ್ಪ ತಿಳಿಸಿದರು.

ಸಮೀಪದ ಅಬ್ಬಿನಹೊಳೆ ಪೊಲೀಸ್ ಠಾಣೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಗಿಡ ನೆಟ್ಟು ನಂತರ ಅವರು ಮಾತನಾಡಿದರು.

ದಿನೇ ದಿನೇ ಕಾಡು ನಾಶವಾಗುತ್ತಿದ್ದು, ಪ್ರಾಕೃತಿಕ ವಿಕೋಪಗಳಿಗೆ ಜೀವ ಸಂಕುಲ ಬಲಿಯಾಗುತ್ತಿದೆ. ಅದಕ್ಕಾಗಿ ಜಾಗತಿಕ ತಾಪಮಾನ ತಗ್ಗಿಸಲು ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳಸಬೇಕೆಂದು ಸಲಹೆ ನೀಡಿದರು.

‘ಈ ವರ್ಷ ದೆಹಲಿಯಂತ ನಗರಗಳಲ್ಲಿ 53 ಡಿಗ್ರಿ ಉಷ್ಣಾಂಶವಿತ್ತು. ಇದರಿಂದ ವೃದ್ಧರು ಮತ್ತು ಮಕ್ಕಳು ಕಷ್ಟ ಅನುಭವಿಸಬೇಕಾಯಿತು. ಅದಕ್ಕಾಗಿ ಕಾಡು ಬೆಳಸಿ, ನಾಡು ಉಳಿಸಬೇಕು’ ಎಂದು ಪಿಎಸ್ಐ ಬಾಹುಬಲಿ ಎಂ.ಪಡನಾಡ ಹೇಳಿದರು.

ಎಎಸ್ಐ ತಿಪ್ಪೇಸ್ವಾಮಿ, ವೆಂಕಟೇಶ್, ನಾಗರಾಜ, ಶ್ರೀನಿವಾಸ್, ಕುಮಾರ್, ಗಗನ, ರಸೂಲ್, ನಿಂಗಣ್ಣ, ರುದ್ರೇಶ್ ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT