ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರಮಸಾಗರ: ದೀಪಾವಳಿ ಅಂಗವಾಗಿ ಕೇದಾರ ಗೌರಿ ಪೂಜೆ

Last Updated 5 ನವೆಂಬರ್ 2021, 6:05 IST
ಅಕ್ಷರ ಗಾತ್ರ

ಭರಮಸಾಗರ: ದೀಪಾವಳಿಯ ಅಂಗವಾಗಿ ಆಚರಿಸುವ ಕೇದಾರ ಗೌರಿ ಪೂಜೆ ದೀಪಾವಳಿ ಅಮಾವಾಸ್ಯೆಯಾದ ಗುರುವಾರದಿಂದ ಆರಂಭವಾಯಿತು.

ಇಲ್ಲಿನ ಬಿಚ್ಚುಗತ್ತಿ ಭರಮಣ್ಣ ನಾಯಕ ದೊಡ್ಡಕೆರೆಯಿಂದ ಗಂಗಾಪೂಜೆ ಮಾಡಿಕೊಂಡು ಗಂಗೆಯನ್ನು ಕಳಸದಲ್ಲಿ ತಂದು ವಿಶೇಷವಾಗಿ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಗಂಗೆಯನ್ನು ತಂದಾಗ ಮನೆಯ ಮಹಿಳೆಯರು ಓಕಳಿ ಬೆಳಗಿ ಆಹ್ವಾನಿಸಿದರು. ಮನೆಯ ಹಿರಿಯರ ಕಾರ್ಯದೊಂದಿಗೆ ಪೂಜೆ ಆರಂಭಗೊಂಡಿತು.

ಕರಿನಾಗಶೆಟ್ರು, ಕಾಡೇಹಳ್ಳಿ, ಮರಿಬೆಶೆಟ್ರು, ಬಸೆಟ್ರು, ತುರುವನೂರು, ಅಮಕುಂಡಿ, ಹುಬ್ಬಳ್ಳಿ ವಂಶದ ಕುಟುಂಬ ಹಾಗೂ ಬಣಜಿಗ ವೀರಶೈವ ಲಿಂಗಾಯತ ಜನಾಂಗದ ಕುಟುಂಬಗಳಲ್ಲಿ ಆಚರಣೆಯಲ್ಲಿ ಬಂದಿರುವ ಈ ಪೂಜೆಯನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ.

ಹಬ್ಬದ ಅಂಗವಾಗಿಪಟ್ಟಣದ ತುಂಬಾ ತಳಿರು ತೋರಣ, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಮನೆಯ ಮುಂದೆ ಕಲಾತ್ಮಕ ರಂಗೋಲಿ ಹಾಕಿ ಹೊಸಬಟ್ಟೆ ತೊಟ್ಟು ಕೇದಾರ ಗೌರಿ ಪ್ರತಿಷ್ಟಾಪಿಸಲ್ಪಟ್ಟ ಮನೆಗೆ ಬಾಗಿನ ಹಿಡಿದು ಪೂಜೆ ಸಲ್ಲಿಸಲು ಕುಟುಂಬಸ್ತರು ಹೋಗುತ್ತಿರುವುದು ಕಂಡುಬಂತು.

ಶನಿವಾರ ಪೂಜೆ ಸಂಪನ್ನಗೊಳ್ಳಲಿದ್ದು ದೊಡ್ಡಪೇಟೆಯಲ್ಲಿ ಮೆರವಣಿಗೆ ಮೂಲಕ ದೊಡ್ಡಕೆರೆಯಲ್ಲಿ ವಿಸರ್ಜಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT