ಭಾನುವಾರ, ಸೆಪ್ಟೆಂಬರ್ 19, 2021
26 °C

ನಾಯಿ ದಾಳಿ: ಮಗುವಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ನಗರದ ದುರ್ಗಮ್ಮ ದೇವಸ್ಥಾನದ ರಸ್ತೆಯಲ್ಲಿ ಬುಧವಾರ ಮನೆಯ ಕಾಂಪೌಂಡ್‌ನಲ್ಲಿ ಆಡುತ್ತಿದ್ದ ಮಗುವಿನ ಮೇಲೆ ನಾಯಿ ದಾಳಿ ಮಾಡಿದ್ದು, ಸೈಯದ್ ರಹಮತ್ ಉಲ್ಲಾ ಅವರ ಮಗ ಮೂರು ವರ್ಷದ ಸೈಯದ್ ಜುಹೇರ್‌ ಗಂಭೀರವಾಗಿ ಗಾಯಗೊಂಡಿದ್ದಾನೆ.   

ದಾರಿಹೋಕರು ಕಲ್ಲು ತೆಗೆದುಕೊಂಡ ಕಾರಣ ಬಿಟ್ಟು ಓಡಿ ಹೋಗಿದೆ ಎಂದು ಸ್ಥಳೀಯ ನಿವಾಸಿ ಸಾದತ್ ಉಲ್ಲಾ ತಿಳಿಸಿದರು.

ಯಾವುದೋ ಹಳ್ಳಿಯಿಂದ ದೇವಸ್ಥಾನಕ್ಕೆ ಮನೆಯ ಹಿರಿಯರ ಜತೆ ಬರುತ್ತಿದ್ದ ಮತ್ತೊಬ್ಬ ಬಾಲಕನಿಗೂ ಅದೇ ನಾಯಿ ಕಚ್ಚಿದೆ. ಜತೆಯಲ್ಲಿದ್ದ ಹಿರಿಯರ ಪಂಚೆಗೆ ಬಾಯಿ ಹಾಕುತ್ತಿದ್ದಂತೆ ಸುತ್ತಮುತ್ತಲ ಜನ ಕಲ್ಲು ದೊಣ್ಣೆಗಳಿಂದ ಬಡಿದು ನಾಯಿಯನ್ನು ಸಾಯಿಸಿದ್ದಾರೆ ಎಂದು ಅವರು ಹೇಳಿದರು.

‘ನಗರಸಭೆಯಲ್ಲಿ ಈಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ನಾಯಿಗಳ ಹಾವಳಿ ನಿಯಂತ್ರಿಸುವಂತೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದೆ. ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಗಮನಕ್ಕೂ ತಂದಿದ್ದೆ. ಆದರೆ ನಗರಸಭೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲಾದರೂ ಬೀದಿ ನಾಯಿಗಳನ್ನು ನಿಯಂತ್ರಿಸದೇ ಹೋದಲ್ಲಿ ಸದಸ್ಯರ ಜತೆ ನಗರಸಭೆ ಎದುರು ಧರಣಿ ನಡೆಸುತ್ತೇನೆ’ ಎಂದು ವಾರ್ಡ್ ಸದಸ್ಯೆ ಷಂಶುನ್ನೀಸಾ ಎಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು