ಶುಕ್ರವಾರ, ಆಗಸ್ಟ್ 12, 2022
28 °C
45,150 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, 2.25 ಲಕ್ಷ ಟನ್ ಉತ್ಪಾದನೆ ಗುರಿ

ಮೆಕ್ಕೆಜೋಳ ಬಂಪರ್ ಬೆಳೆ ನಿರೀಕ್ಷೆ

ಸಾಂತೇನಹಳ್ಳಿ ಸಂದೇಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ತಾಲ್ಲೂಕಿನಲ್ಲಿ ಈ ವರ್ಷ 45,150 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಬಂಪರ್ ಬೆಳೆ ನಿರೀಕ್ಷಿಸಲಾಗಿದೆ. 37,995 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ 7,155 ಹೆಕ್ಟೇರ್ ಹೆಚ್ಚುವರಿ ಬಿತ್ತನೆ ಆಗಿದೆ. ಸರಾಸರಿ ಎಕರೆಗೆ 20 ಕ್ವಿಂಟಲ್ ಮೆಕ್ಕೆಜೋಳ ಇಳುವರಿ ನಿರೀಕ್ಷಿಸಲಾಗಿದ್ದು, ಕೃಷಿ ಇಲಾಖೆ 2.25 ಲಕ್ಷ ಟನ್ ಉತ್ಪಾದನೆಯ ಗುರಿ ಹೊಂದಿದೆ.

‘ಕಸಬಾ, ರಾಮಗಿರಿ, ಬಿ.ದುರ್ಗ ಹೋಬಳಿಗಳಲ್ಲಿ ಮೆಕ್ಕೆಜೋಳ ತೆನೆಯೊಡೆದಿದ್ದು, ಕಾಳುಕಟ್ಟುವ ಹಂತದಲ್ಲಿದೆ. ಈ ಪ್ರದೇಶದ ಬೆಳೆಗೆ ಮಳೆ ಅಗತ್ಯವಾಗಿದ್ದು, ಒಂದು ಬಾರಿ ಉತ್ತಮ ಮಳೆ ಬಂದರೆ ಹೆಚ್ಚು ಇಳುವರಿ ಬರಲಿದೆ. ತಾಳ್ಯ ಹೋಬಳಿಯ ಶಿವಗಂಗಾ, ಚಿತ್ರಹಳ್ಳಿ, ಟಿ.ನುಲೇನೂರು, ಬಿ.ಜಿ.ಹಳ್ಳಿ ಸುತ್ತಲಿನ ಪ್ರದೇಶದಲ್ಲಿ ಮೆಕ್ಕೆಜೋಳ ತಡವಾಗಿ ಬಿತ್ತನೆ ಆಗಿದ್ದರಿಂದ ಈಗ ತೆನೆ ಬಿಡುವ ಹಂತದಲ್ಲಿದೆ. ಈ ಭಾಗಕ್ಕೆ ಇನ್ನೂ ಎರಡು ಮಳೆ ಬೇಕಾಗುತ್ತದೆ. ತಾಲ್ಲೂಕಿನ ಎಲ್ಲಾ ಭಾಗದಲ್ಲೂ ಸಮೃದ್ಧವಾಗಿ ಮೆಕ್ಕೆಜೋಳ ಬೆಳೆದಿದ್ದು, ಹೆಚ್ಚು ಉತ್ಪಾದನೆ
ನಿರೀಕ್ಷೆ ಮಾಡಲಾಗಿದೆ’ ಎಂದು ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ವಿ.ಸಿ. ಉಮೇಶ್ ಹೇಳಿದರು.

‘ತಾಲ್ಲೂಕಿನಲ್ಲಿ ರಾಗಿ, ಹೈಬ್ರಿಡ್ ಜೋಳ, ತೊಗರಿ, ಹತ್ತಿ, ಶೇಂಗಾ, ಅವರೆ ಸೇರಿ ಒಟ್ಟು 54,313 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಈ ವರ್ಷ ಉತ್ತಮ ಮಳೆ ಬಂದಿರುವುದರಿಂದ ಶೇ 98.06ರಷ್ಟು ಬಿತ್ತನೆ ಆಗಿದ್ದು, ಎಲ್ಲಾ ಕಡೆ ಉತ್ತಮ
ಬೆಳೆ ಬಂದಿದೆ. ಉತ್ತಮ ಮಳೆ ಬಂದರೆ ನಿರೀಕ್ಷೆಗೂ ಮೀರಿ ಆಹಾರ ಧಾನ್ಯಗಳ ಉತ್ಪಾದನೆ ಆಗಲಿದೆ’ ಎಂದು ಎಡಿಎ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು