ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಂಪುರ: ಯೂರಿಯಾ ಖರೀದಿಗೆ ಮುಗಿಬಿದ್ದ ರೈತರು

Last Updated 28 ಆಗಸ್ಟ್ 2020, 16:59 IST
ಅಕ್ಷರ ಗಾತ್ರ

ಶ್ರೀರಾಂಪುರ: ಹೋಬಳಿಯಾದ್ಯಂತ ಬಿತ್ತನೆಯಾಗಿದ್ದ ರಾಗಿ ಎಡೆಕುಂಟೆ ಹೊಡೆಯುವ ಹಂತಕ್ಕೆ ಬಂದಿದ್ದು, ರೈತರು ಶುಕ್ರವಾರ ಬೆಳಿಗ್ಗೆ ಯೂರಿಯಾ ಖರೀದಿಗೆ ಮುಗಿಬಿದ್ದರು.

ಯೂರಿಯಾ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ ಶ್ರೀರಾಂಪುರ ಸೇರಿ ಸುತ್ತಲಿನ ಹಳ್ಳಿಗಳ ರೈತರು ಇಲ್ಲಿನ ಅಂಬೇಡ್ಕರ್ ಸರ್ಕಲ್ ಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಹಾಗೂ ಖಾಸಗಿ ಗೊಬ್ಬರದ ಅಂಗಡಿಗಳ ಮುಂದೆ ಜಮಾಯಿಸಿದರು.

‘ಒಂದು ಚೀಲ ಯೂರಿಯಾಗೆ ₹ 300 ಕೊಟ್ಟು ಖರೀದಿಸಿದ್ದೇವೆ. ಈಗಾಗಲೇ ರಾಗಿ ಬೆಳೆಗೆ ಒಂದೆರಡು ಬಾರಿ ಎಡೆಕುಂಟೆ ಹೊಡೆದಿದ್ದೇವೆ. ಶೀಘ್ರ ಮಳೆ ಬಂದರೆ ಈ ಬಾರಿ ಉತ್ತಮ ಫಸಲು ಬರುವುದರಲ್ಲಿ ಸಂದೇಹವಿಲ್ಲ’ ಎಂದು ರೈತ ಶಿವಣ್ಣ ಹೇಳಿದರು.

‘ಶ್ರೀರಾಂಪುರ 40 ಟನ್ ಹಾಗೂ ಬೆಲಗೂರು 40 ಟನ್ ಯೂರಿಯಾ ಬಂದಿದ್ದು, ಒಂದೇ ದಿನದಲ್ಲಿ ಖಾಲಿಯಾಗಿದೆ. ಯೂರಿಯಾಗೆ ಕೊರತೆಯಾಗುವುದಿಲ್ಲ. ಒಂದೆರಡು ದಿನಗಳಲ್ಲಿ ಮತ್ತೆ ಬರಲಿದೆ. ಮಳೆ ಬಂದರೆ ಯೂರಿಯಾಗೆ ಬೇಡಿಕೆ ಹೆಚ್ಚಾಗಲಿದೆ. ಒಬ್ಬ ರೈತರಿಗೆ ಗರಿಷ್ಠ 3 ಚೀಲ ವಿತರಿಸಲಾಗಿದೆ’ ಎಂದು ಕೃಷಿ ಅಧಿಕಾರಿ ಕರಿಬಸವಯ್ಯ ಮಾಹಿತಿ ನೀಡಿದರು.

ಹಳ್ಳಿಗಳಿಗೆ ಬಸ್ ವ್ಯವಸ್ಥೆ ಇಲ್ಲದಿದ್ದರಿಂದ ರೈತರು ಬೈಕ್, ಆಟೊಗಳಲ್ಲಿ ಯೂರಿಯಾ ಚೀಲಗಳನ್ನು ಹೊತ್ತೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT