ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಶುರಾಂಪುರ: ಬೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ

Published 7 ಮಾರ್ಚ್ 2024, 16:22 IST
Last Updated 7 ಮಾರ್ಚ್ 2024, 16:22 IST
ಅಕ್ಷರ ಗಾತ್ರ

ಪರಶುರಾಂಪುರ: ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ರೈತರು ಎತ್ತಿನ ಗಾಡಿ ಮತ್ತು ಕಳ್ಳೆಯನ್ನು ಹಾಕಿ ಗ್ರಾಮದ ಬೆಸ್ಕಾಂ ಕಚೇರಿ ಮುಂದೆ ರೈತರು ಪ್ರತಿಭಟನೆ ಮಾಡಿದ ಘಟನೆ ಗುರುವಾರ ನಡೆಯಿತು.

‘ಹಗಲು ವೇಳೆ 4 ಗಂಟೆ ರಾತ್ರಿ ವೇಳೆ 3 ಗಂಟೆ ವಿದ್ಯುತ್ ನೀಡುತ್ತಿದ್ದು, ಪದೇ ಪದೇ ವಿದ್ಯುತ್ ಕಡಿತಗೊಳಿಸುವು ಏಕೆ. ಇದರಿಂದ ಪಂಪ್‌ಸೆಟ್ ಸುಟ್ಟು ಹೋಗುತ್ತವೆ. ಜೊತೆಗೆ ಬೆಳೆಗಳಿಗೆ ನೀರು ಹಾಯಿಸಲು ಕಷ್ಟವಾಗುತ್ತಿದೆ’ ಎಂದು ರೈತರು ಅಕ್ರೋಶ ವ್ಯಕ್ತಪಡಿಸಿದರು.

‘ಒಂದು ಗಂಟೆಗೆ ಹೆಚ್ಚು ಹೊತ್ತು ಬೆಸ್ಕಾಂ ಕಚೇರಿ ಮುಂದೆ ತಡೆ ಹಾಕಿದ ರೈತರು, ಪದೇಪದೇ ವಿದ್ಯುತ್ ಕಡಿತಗೊಳಿಸಲು ಕಾರಣ ಏನು ಎಂದು ಮೇಲಧಿಕಾರಿಗಳು ಸ್ಥಳಕ್ಕೆ ಬಂದು ಹೇಳಬೇಕು. ಇನ್ನುಮುಂದೆ ಕಡಿತಗೋಳಿಸುವುದಿಲ್ಲ ಎಂದು ಭರವಸೆ ನೀಡಬೇಕು’ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ಬೆಸ್ಕಾಂ ಅಧಿಕಾರಿ ಶಿವಕುಮಾರ್, ಇನ್ನೂ ಮೂರು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸುಚವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಭಾಷಾ, ರಾಮಚಂದ್ರಪ್ಪ, ಪರಮೇಶ್ವರಪ್ಪ, ಈರಣ್ಣ, ರತ್ನಪ್ಪ, ಗೋವಿಂದರಾಜ, ಅಣ್ಣಪ್ಪ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT