ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮಪುರ | ಕೆಇಬಿ ಸಿಬ್ಬಂದಿ ಅಜಾಗರೂಕತೆ: ₹ 5 ಲಕ್ಷದ ಬೀಜೋತ್ಪಾದನೆ ಹತ್ತಿ ಭಸ್ಮ

ಹರಿಯಬ್ಬೆ ಬಳಿ ಜಂಗಲ್ ತೆಗೆಯುವಾಗ ಘಟನೆ
Published 28 ಆಗಸ್ಟ್ 2024, 6:36 IST
Last Updated 28 ಆಗಸ್ಟ್ 2024, 6:36 IST
ಅಕ್ಷರ ಗಾತ್ರ

ಧರ್ಮಪುರ: ಸಮೀಪದ ಹರಿಯಬ್ಬೆ ಬಳಿ ಬೆಸ್ಕಾಂ ಸಿಬ್ಬಂದಿ ಜಂಗಲ್ ತೆಗೆಯುವಾಗ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ತಂತಿ ಮೇಲೆ ಕೊಂಬೆ ಬಿದ್ದ ಕಾರಣ ವಿದ್ಯುತ್ ಶಾರ್ಟ್ ಸರ್ಕೀಟ್ ಉಂಟಾಗಿ ಮನೆಯ ಮುಂದೆ ಬಿಸಿಲಿಗೆ ಹಾಕಿದ್ದ 9 ಕ್ವಿಂಟಲ್ ಬೀಜೋತ್ಪಾದನೆಯ ಹತ್ತಿ ಸಂಪೂರ್ಣ ಸುಟ್ಟು ಅಪಾರ ನಷ್ಟ ಉಂಟಾಗಿದೆ.

ಹರಿಯಬ್ಬೆ ರೈತ ಎಂಜಾರಪ್ಪ ಅವರು ಮೂರು ಎಕೆರೆ ಭೂಮಿಯಲ್ಲಿ ರಾಶಿ 555 ಕಂಪನಿಯ ಬೀಜೋತ್ಪಾದನೆಯ ಹತ್ತಿಯನ್ನು ಸಮೃದ್ಧವಾಗಿ ಬೆಳೆದಿದ್ದು ಮಂಗಳವಾರ ತಮ್ಮ ಮನೆಯ ಮುಂದೆ ಬಿಸಿಲಿಗೆ ಹಾಕಿದ್ದರು.

ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದದ 40 ಮನೆಗಳಲ್ಲಿ ಟಿವಿ, ಫ್ಯಾನ್, ರೆಫ್ರಿಜರೇಟರ್‌ ಸಂಪೂರ್ಣ ಸುಟ್ಟು ಹೋಗಿವೆ.

ಹರಿಯಬ್ಬೆ ಬೆಸ್ಕಾಂ ಸಿಬ್ಬಂದಿ ಜಂಗಲ್ ತೆಗೆಯಲು ಪಂಪ್‌ಸೆಟ್‌ ಲೈನ್ ಮಾತ್ರ ಎಲ್‌ಸಿ ತೆಗೆದುಕೊಂಡಿದ್ದಾರೆ. ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕದ ಎಲ್‌ಸಿ ತೆಗೆದುಕೊಳ್ಳದೆ ಕಾಮಗಾರಿ ಮಾಡುತ್ತಿದ್ದಾಗ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕದ ತಂತಿ ಮೇಲೆ ಕಾಗೆ ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬೆಸ್ಕಾಂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT