ಶನಿವಾರ, ಮೇ 15, 2021
29 °C
ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯಿಂದ ಮೇವು ವಿತರಣೆ

ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ನಾಯಕನಹಟ್ಟಿ: ಹೋಬಳಿಯಲ್ಲಿ ಬಿಸಿಲಿನ ತಾಪ ಹೆಚ್ಚಿದ್ದು, ಅಡವಿಯಲ್ಲಿ ದೇವರ ಎತ್ತುಗಳಿಗೆ ಮೇವು, ನೀರು ಇಲ್ಲದಂತಾಗಿದೆ. ಹಾಗಾಗಿ ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಕೆ.ಬಿ. ಓಬಣ್ಣ ಹೇಳಿದರು.

ಹೋಬಳಿಯ ಮಲ್ಲೇಬೋರನಹಟ್ಟಿ ಗ್ರಾಮದ ವಡಲೇಶ್ವರ ದೇವರ ಎತ್ತುಗಳಿಗೆ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯಿಂದ ಮೇವು ವಿತರಿಸಿ ಅವರು ಮಾತನಾಡಿದರು.

ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಮ್ಯಾಸನಾಯಕ ಬುಡಕಟ್ಟು ಜನಾಂಗವು ವಿಶಿಷ್ಟವಾದ ಸಂಸ್ಕೃತಿ ಹೊಂದಿದೆ. ಜನಾಂಗವು ಹಿಂದಿನಿಂದಲೂ ಪಶುಪಾಲನೆ ಮತ್ತು ಪಶುಗಳ ಸಂರಕ್ಷಣೆಯಲ್ಲಿ ತೊಡಗಿದೆ. ತಮ್ಮ ಕಟ್ಟೆಮನೆಗಳು ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಗುಡಿಕಟ್ಟು ದೇವರುಗಳಿಗೆ ದೇವರ ಎತ್ತುಗಳನ್ನು ಬಿಡುವ ಪದ್ಧತಿ ಇದೆ. ಈ ದೇವರ ಎತ್ತುಗಳನ್ನು ಪೋಷಣೆ ಮಾಡಲು ಕಿಲಾರಿಗಳು ಇದ್ದಾರೆ. ಅಡವಿಯಲ್ಲಿ ಮೇವು ಮತ್ತು ನೀರಿನ ಕೊರತೆಯಿಂದ ದೇವರ ಎತ್ತುಗಳು ಸಾಯುತ್ತಿವೆ. ಆದಕಾರಣ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯನ್ನು ರಚಿಸಿಕೊಂಡು ಎರಡೂ ತಾಲ್ಲೂಕಿನಲ್ಲಿರುವ ದೇವರ ಎತ್ತುಗಳಿಗೆ ಪ್ರತಿವರ್ಷ ಬೇಸಿಗೆಯಲ್ಲಿ ಮೇವು ಒದಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮುಖಂಡ ಕಾಕಾಸೂರಯ್ಯ, ಸೋಮವಾರ ಜಗಳೂರು ತಾಲ್ಲೂಕಿನಿಂದ ಉಚಿತವಾಗಿ ಮೆಕ್ಕೆಜೋಳದ ಮೇವು ಸಂಗ್ರಹಿಸಿ ಹೋಬಳಿಯ ಮಲ್ಲೇಬೋರನಹಟ್ಟಿ ವಡಲೇಶ್ವರ ದೇವರ ಎತ್ತುಗಳು, ಭೀಮಗೊಂಡನಹಳ್ಳಿ ಮತ್ತು ದಾಸರಮುತ್ತೇನಹಳ್ಳಿ ಓಬಳದೇವರು ದೇವರ ಎತ್ತುಗಳಿಗೆ, ಮಲ್ಲೂರಹಳ್ಳಿ ರಾಜಲುದೇವರು ದೇವರ ಎತ್ತುಗಳಿಗೆ ತಲಾ ಒಂದು ಲೋಡ್‌ನಷ್ಟು ಮೇವು ವಿತರಿಸಲಾಯಿತು. ನೆಲಗೇತಹಟ್ಟಿ ಚನ್ನಕೇಶವ ದೇವರ ಎತ್ತುಗಳಿಗೆ, ಕುದಾಪುರ, ಬೋಸೆದೇವರಹಟ್ಟಿ, ನನ್ನಿವಾಳ ಗ್ರಾಮಗಳ ದೇವರ ಎತ್ತುಗಳಿಗೆ ಮೇವು ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಮೇವು ಖಾಲಿಯಾದ ತಕ್ಷಣ ಮತ್ತೆ ಮೇವು ಒದಗಿಸಲಾಗುವುದು ಎಂದು ತಿಳಿಸಿದರು.

ಮುಖಂಡ ಚಂದ್ರಣ್ಣ, ಟಿ.ಪಿ. ಮಂಜುನಾಥ, ಕೆ.ಸಿ. ರಮೇಶ, ಕಿಲಾರಿ ಪಾಲಯ್ಯ, ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.