ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು: 128 ಕಡೆ ಗಣಪತಿ ಪ್ರತಿಷ್ಠಾಪನೆ

Published : 8 ಸೆಪ್ಟೆಂಬರ್ 2024, 15:27 IST
Last Updated : 8 ಸೆಪ್ಟೆಂಬರ್ 2024, 15:27 IST
ಫಾಲೋ ಮಾಡಿ
Comments

ಮೊಳಕಾಲ್ಮುರು: ತಾಲೂಕಿನಾದ್ಯಂತ ಸಂಕಷ್ಟ ನಿವಾರಕ ಗಣಪತಿಯ ಹಬ್ಬವನ್ನು ಸಂಭ್ರಮ, ಸಡಗರದಿಂದ ಶನಿವಾರ ಮತ್ತು ಭಾನುವಾರ ಆಚರಣೆ ಮಾಡಲಾಯಿತು.

ಗ್ರಾಮಗಳ ಮುಖ್ಯ ಬೀದಿಗಳಲ್ಲಿ ಬಂಟ್ಟಿಂಗ್ಸ್‌ ಕಟ್ಟಿ, ಶುಕ್ರವಾರ ರಾತ್ರಿಯಿಡೀ ಮಂಟಪಗಳ ಅಲಂಕಾರ ಮಾಡಿದರು. ಶನಿವಾರ ಬೆಳಿಗ್ಗೆ ಪೂಜೆ ಸಲ್ಲಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಗ್ರಾಮಸ್ಥರು ಗಣೇಶನ ದರ್ಶನ ಪಡೆದರು. ಮೂರು ದಿನಗಳವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಗಮನ ಸೆಳೆಯುತ್ತಿವೆ. 

ಮೊಳಕಾಲ್ಮುರು ಠಾಣೆ ವ್ಯಾಪ್ತಿಯಲ್ಲಿ 63 ಕಡೆ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಇದರಲ್ಲಿ ಶನಿವಾರ 6 ಮೂರ್ತಿಗಳ ವಿಸರ್ಜನೆ ನಡೆಯಿತು. ಉಳಿದಂತೆ ಸೋಮವಾರ 43, ಬುಧವಾರ 12 ಮೂರ್ತಿಗಳ ವಿಸರ್ಜನೆ ಜರುಗಲಿದೆ. ಪಟ್ಟಣದ ಹಿಂದೂ ಮಹಾಗಣಪತಿ ಮತ್ತು ವಿವಿಧ ಬಡಾವಣೆಗಳ ಮೂರ್ತಿಗಳ ವಿಸರ್ಜನೆಯನ್ನು ಸೆ.15 ರಂದು ನಡೆಯಲಿದೆ ಎಂದು ಪಿಎಸ್‌ಐ ಜಿ. ಪಾಂಡುರಂಗಪ್ಪ ತಿಳಿಸಿದರು.

ರಾಂಪುರ ಠಾಣೆ ವ್ಯಾಪ್ತಿಯಲ್ಲಿ 65 ಕಡೆ ಸಾರ್ವಜನಿಕ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದ್ದು, ವಿವಿಧ ಗ್ರಾಮಗಳಲ್ಲಿ ಗ್ರಾಮದೇವತೆ ಮಾರಮ್ಮದೇವಿಯ ಹಬ್ಬವಿರುವ ಕಾರಣ, ರಾಂಪುರದ 2 ಮೂರ್ತಿಗಳನ್ನು ಹೊರತುಪಡಿಸಿದಲ್ಲಿ ಉಳಿದ ಮೂರ್ತಿಗಳ ವಿಸರ್ಜನೆ ಸೋಮವಾರ ಜರುಗಲಿದೆ ಎಂದು ಪಿಎಸ್‌ಐ ಮಹೇಶ್‌ ಹೊಸಪೇಟೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT