ಭೋವಿ ಅಭಿವೃದ್ಧಿ ನಿಗಮದ ₹ 198 ಕೋಟಿಗೂ ಅಧಿಕ ಹಣ ಲೂಟಿ ಮಾಡಲಾಗಿದೆ. ಅದು ಸಮುದಾಯದವರ ಹಣ. ಎಲ್ಲರೂ ಸೇರಿ ವಸೂಲಿ ಮಾಡಬೇಕಿದೆ. ನಾನು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ. ನಾನು ನಿಗಮಕ್ಕೆ ಹೋದಾಗ ಒಂದೂ ಕಡತಗಳಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಆಗಿರುವ ಖಾತೆ ಪರಿಶೀಲಿಸಿದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಕಡತಗಳಿಲ್ಲದಿದ್ದರೂ ಲೆಕ್ಕ ಸಿಗುತ್ತದೆ ಎಂದಿದ್ದಾರೆ.