ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ’; ಮಾಜಿ ಸಚಿವ ಡಿ.ಸುಧಾಕರ್

Last Updated 2 ಆಗಸ್ಟ್ 2021, 2:30 IST
ಅಕ್ಷರ ಗಾತ್ರ

ಹಿರಿಯೂರು: ‘ರಾಜ್ಯದಲ್ಲಿ ಒಂದೆಡೆ ಕೊರೊನಾ ಮೂರನೇ ಅಲೆ ಹರಡುತ್ತಿರುವ ಭೀತಿ ಕಾಡುತ್ತಿದ್ದರೆ, ಮತ್ತೊಂದೆಡೆ ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಜನರ ಬದುಕು ಬೀದಿಗೆ ಬಿದ್ದಿದೆ.ಇಂತಹ ಸಮಯದಲ್ಲಿ ಬಿಜೆಪಿಯವರು ರಾಜಕೀಯ ಪ್ರಹಸನದಲ್ಲಿ ತೊಡಗಿರುವುದು ಜನರ ದೌರ್ಭಾಗ್ಯ’ ಎಂದು ಮಾಜಿ ಸಚಿವ ಡಿ.ಸುಧಾಕರ್ ಆರೋಪಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ‘ಕೊರೊನಾ ಸಹಾಯಹಸ್ತ’ ಕಾರ್ಯ
ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಕೊರೊನಾ ಸೋಂಕಿನಿಂದ ಮೃತಪಟ್ಟವರ ಲೆಕ್ಕವನ್ನೂ ರಾಜ್ಯ ಸರ್ಕಾರ ಸರಿಯಾಗಿ ಕೊಡುತ್ತಿಲ್ಲ. ತಪ್ಪು ಲೆಕ್ಕ ಕೊಡುವ ಮೂಲಕ ಯಾವ ಸಾಧನೆ ಮಾಡಲು ಇವರು ಹೊರಟಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಸೋಂಕು ತೀವ್ರತರವಾಗಿದ್ದ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಸಿಗದೆ ಖಾಸಗಿ ನರ್ಸಿಂಗ್ ಹೋಂಗಳಿಗೆ ದಾಖಲಾಗಿ ₹ 15 ಲಕ್ಷದಿಂದ ₹ 20 ಲಕ್ಷದ ಜೊತೆಗೆ ಹಲವರು ಜೀವವನ್ನೂ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಿದ್ದು, ನೂತನ ಸಂಪುಟ ರಚನೆಗೆ ನಡೆಯುತ್ತಿರುವ ಸರ್ಕಸ್ ನೋಡುತ್ತಿರುವ ಜನರು ಬಿಜೆಪಿ ಬಗ್ಗೆ ಅಸಹ್ಯ ಪಡುತ್ತಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತವನ್ನು ನೆನೆಸಿ
ಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

‘ಪಕ್ಷದ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು, ಮುಖಂಡರು ಪ್ರತಿ ಮನೆಗೆ ಭೇಟಿ ನೀಡಿ ಕೊರೊನಾದಿಂದ ಮೃತಪಟ್ಟವರ ಪಕ್ಕಾ ದಾಖಲೆ ಸಂಗ್ರಹಿಸಿ ತಾಲ್ಲೂಕು ಸಮಿತಿಗೆ ನೀಡಬೇಕು. ನಂತರ ಅದನ್ನು ಕೆಪಿಸಿಸಿಗೆ ಕಳುಹಿಸಲಾಗುತ್ತದೆ’ ಎಂದು ತಿಳಿಸಿದರು.

ಕೆಪಿಸಿಸಿ ಸದಸ್ಯ ಎ.ಎಂ. ಅಮೃತೇಶ್ವರಸ್ವಾಮಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ಜೆ. ರಮೇಶ್, ನಗರಸಭೆ ಅಧ್ಯಕ್ಷೆ ಷಂಶುನ್ನೀಸಾ, ಉಪಾಧ್ಯಕ್ಷ ಬಿ. ಎನ್. ಪ್ರಕಾಶ್, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಪಾತಣ್ಣ, ನಗರಸಭಾ ಸದಸ್ಯರಾದ ಸುರೇಖಾಮಣಿ, ಮದಲಮರಿಯಾ, ಮಮತಾ, ಗೀತಾ, ರತ್ನಮ್ಮ, ಈರಲಿಂಗೇಗೌಡ, ಜಗನ್ನಾಥ್, ಜಬೀವುಲ್ಲಾ, ವಿಶಾಲಾಕ್ಷಿ, ಜಿ. ಎಸ್. ತಿಪ್ಪೇಸ್ವಾಮಿ, ಗುಂಡೇಶ್ ಕುಮಾರ್, ಗಿರೀಶ್, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT