ಬುಧವಾರ, ಜೂನ್ 29, 2022
26 °C

ಧರ್ಮಪುರ: ಮೈದುಂಬಿದ ಸುವರ್ಣಮುಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧರ್ಮಪುರ: ಹೋಬಳಿಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಣ್ಣಪುಟ್ಟ ಕೆರೆ, ಕಟ್ಟೆ, ಚೆಕ್ ಡ್ಯಾಂಗಳು ತುಂಬಿ, ಹಳ್ಳಗಳು ಮೈತುಂಬಿ ಹರಿಯುತ್ತಿವೆ.

ಎರಡು ದಿನಗಳಿದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶಿರಾ ತಾಲ್ಲೂಕು ಮತ್ತು ಧರ್ಮಪುರ ಹೋಬಳಿಯಲ್ಲಿ ಮಳೆಯಾಗಿದ್ದರಿಂದ ಹೂವಿನಹೊಳೆ ಬಳಿ ನಿರ್ಮಾಣಗೊಂಡಿರುವ ಚೆಕ್ ಡ್ಯಾಂ ತುಂಬಿ ಸುವರ್ಣಮುಖಿ ನದಿ ಮೈತುಂಬಿ ಹರಿಯುತ್ತಿದೆ.

ಮೂವತ್ತು ವರ್ಷಗಳಿಂದಲೂ ಈ ಭಾಗದಲ್ಲಿ ಉತ್ತಮ ಮಳೆಯೇ ಆಗಿರಲಿಲ್ಲ. ಇದರಿಂದ ಬೇಸತ್ತಿದ್ದ ಜನರು ದೂರದ ನಗರಗಳಿಗೆ ವಲಸೆ ಹೋಗಿದ್ದಾರೆ. ವೇದಾವತಿ ನದಿಯಲ್ಲಿ ನೀರು ಸಂಗ್ರಹ ಆಗಿರುವುದರಿಂದ  ಹೋಬಳಿಯ ರೈತರ ಜಮೀನುಗಳಲ್ಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗಿದೆ. ಕೃಷಿ ಚಟುವಟಿಕೆ ಗರಿಗೆದರಲಿದೆ.

ವೇದಾವತಿ ನದಿಗೆ ಕೂನಿಕೆರೆಯಿಂದ ಬೊಂಬೇರಹಳ್ಳಿಯವರೆಗೆ ಒಟ್ಟು 14 ಚೆಕ್ ಡ್ಯಾಂ ಮತ್ತು ಬ್ಯಾರೇಜ್ ನಿರ್ಮಾಣವಾಗಿರುವುದರಿಂದ ಸಾಕಷ್ಟು ನೀರು ಸಂಗ್ರಹಗೊಂಡಿದ್ದು, 20 ಕಿ.ಮೀಯಿಂದ 30 ಕಿ.ಮೀ.ಯವರೆಗೆ ಅಂತರ್ಜಲ ಹೆಚ್ಚಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಜಿ. ಭೀಮರಾಜ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು