ಹಿರಿಯೂರು: ಚಿತ್ರದುರ್ಗ ಮತ್ತು ಹಿರಿಯೂರಿನ ಭಾರತೀಯ ವೈದ್ಯಕೀಯ ಸಂಘದ ಶಾಖೆಗಳ ಸಹಯೋಗದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಯಲು ಶನಿವಾರ ರಿಯಾಯಿತಿ ದರದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹಲಿಂಗಪ್ಪ ಚಾಲನೆ ನೀಡಿದರು.

‘ವಿಶ್ವ ಆರೋಗ್ಯ ಸಂಸ್ಥೆಯು ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಆರಂಭಿಸಿರುವ ಜಾಗತಿಕ ಅಭಿಯಾನದ ಅನುಷ್ಠಾನಕ್ಕಾಗಿ, ಗರ್ಭಕಂಠದ ಕ್ಯಾನ್ಸರ್ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಎಚ್ಪಿವಿ ಲಸಿಕೆ ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಎಚ್ಪಿವಿ ಲಸಿಕೆ ಪ್ರಮುಖವಾಗಿ 9 ರಿಂದ 26 ವರ್ಷ ವಯೋಮಾನದವರಿಗೆ ಅತ್ಯಂತ ಪರಿಣಾಮಕಾರಿಯಾಗಿದೆ. ಪಿಎಪಿ ಪರೀಕ್ಷೆಯೊಂದಿಗೆ 45 ವರ್ಷದವರಿಗೂ ನೀಡಬಹುದಾಗಿದೆ. ಲಸಿಕೆಯನ್ನು ಹಿರಿಯೂರಿನ ಕಿರಣ್ ನರ್ಸಿಂಗ್ ಹೋಂ, ಸಂಜೀವಿನಿ ಆಸ್ಪತ್ರೆ, ಗುರು ಆಸ್ಪತ್ರೆ, ಗಣೇಶ್ ಮಕ್ಕಳ ಆಸ್ಪತ್ರೆ ಹಾಗೂ ಬಾಲಾಜಿ ಆಸ್ಪತ್ರೆಗಳಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಪಡೆಯಬಹುದು ಎಂದು ಸ್ತ್ರೀರೋಗ ತಜ್ಞೆ ಲತಾ ರಾಮಚಂದ್ರಪ್ಪ ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ವೆಂಕಟೇಶ್, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಶಿವಣ್ಣರೆಡ್ಡಿ, ಡಾ. ರಾಮಚಂದ್ರಪ್ಪ, ಡಾ. ವೆಂಕಟೇಶ್, ಡಾ. ಸೌಮ್ಯಾ, ಡಾ. ರವಿನಾಯಕ್, ಡಾ. ಚಂದ್ರಕಲಾ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.