ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿಗೆ ಸಂಘಟಿತ ಹೋರಾಟ: ಎಚ್. ಎಸ್. ನಾಗೇಶ್

Published 26 ಜುಲೈ 2023, 14:17 IST
Last Updated 26 ಜುಲೈ 2023, 14:17 IST
ಅಕ್ಷರ ಗಾತ್ರ

ಹಿರಿಯೂರು: ‘ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಛಾಯಾಗ್ರಾಹಕರಲ್ಲಿ ಬಹುತೇಕರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ರಾಜ್ಯ ಛಾಯಾಗ್ರಾಹಕರ ಸಂಘವು ಸಂಘಟಿತ ಹೋರಾಟದ ಮೂಲಕ ಛಾಯಾಗ್ರಾಹಕರ ಹಿತಾಸಕ್ತಿ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ’ ಎಂದು ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಚ್. ಎಸ್. ನಾಗೇಶ್ ಹೇಳಿದರು.

ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲ್ಲೂಕು ಛಾಯಾಗ್ರಾಹಕರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.

‘ವೃತ್ತಿ ಹಾಗೂ ಜೀವನ ಭದ್ರತೆ ಜೊತೆಗೆ ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಕ್ಯಾಮೆರಾ ಬಳಸುವ ಕೌಶಲದ ಕುರಿತ ತರಬೇತಿಯ ಅಗತ್ಯವಿದೆ. ಕೋವಿಡ್ ಸಮಯದಲ್ಲಿ ಛಾಯಾಗ್ರಾಹಕರ ಬದುಕು ಸಂಪೂರ್ಣ ಅತಂತ್ರವಾಗಿತ್ತು. ಇಂದಿಗೂ ಪರಿಸ್ಥಿತಿ ಸುಧಾರಿಸಿಲ್ಲ. ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಭರವಸೆ ಇದೆ. ಅಲ್ಲಿಯವರೆಗೂ ಶಾಂತಿಯುತ ಮಾರ್ಗದಲ್ಲೇ ಹೋರಾಟ ನಡೆಸೋಣ’ ಎಂದು ಮನವಿ ಮಾಡಿದರು.

‘ಪ್ರತಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಂಘವನ್ನು ಬಲಪಡಿಸಬೇಕಿದೆ. ಹೀಗಾಗಿ ಸದಸ್ಯರು ತಪ್ಪದೆ ಸದಸ್ಯತ್ವ ನೋಂದಣಿ ಹಾಗೂ ನವೀಕರಣ ಮಾಡಿಸಬೇಕು.  ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ 10ನೇ ಸಮಾವೇಶವನ್ನು ಆಗಸ್ಟ್ 8 ರಂದು ಬೆಂಗಳೂರಿನ ಮಂತ್ರಿ ಮಾಲ್ ಎದುರಿನ ದಿ.ಗುಂಡೂರಾವ್ ಕ್ರೀಡಾ ಸಂಕೀರ್ಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ’ ಎಂದರು.

ಸಂಘದ ಮುಖಂಡರಾದ ಉಮಾಶಂಕರ್, ಸಂಪತ್ ಕುಮಾರ್, ಗೌಸ್ ಪೀರ್, ಕೃಷ್ಣಪ್ಪ, ಪರಮೇಶ್, ಪಾರ್ಥಸಾರಥಿ, ವಿಜಯಕುಮಾರ್, ಗೋವಿಂದರಾಜ್, ಕಾಂತರಾಜ್ ಹುಲಿ, ನವೀದ್, ಮಂಜು, ಬಾಬು, ಮಂಜುನಾಥ್, ದೀಪು ಶಂಕರ್, ವಿಶ್ವನಾಥ್, ಉಮೇಶ್, ಶ್ರೀನಿವಾಸ್, ಅಖಿಲೇಶ್, ರಘು, ನಾಗೇಶ್, ಗಿರಿಧರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT