ಹೊಳಲ್ಕೆರೆ: ಹೊಸದುರ್ಗದ ಕಡೆಯಿಂದ ವೇಗವಾಗಿ ಬಂದ ಕಾರು ಎನ್.ಜಿ. ಹಳ್ಳಿ ಗೇಟ್ನ ಹುಣಸೆ ಮರದ ಕೆಳಗೆ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 10 ಬೈಕ್ಗಳು, 2 ಕಾರುಗಳು ಹಾಗೂ ಒಂದು ಆಟೊರಿಕ್ಷಾ ಜಖಂಗೊಂಡಿವೆ. ಕಾರು ಚಾಲಕ ಯಶಪಾಲ್ ಸಿಂಗ್ ಹಾಗೂ ಲಕ್ಷ್ಮಿಕುಮಾರ್ ಎಂಬುವರಿಗೆ ಗಾಯಗಳಾಗಿದ್ದು, ಹೊಸದುರ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುತ್ತಿಕಟ್ಟೆಯ ಪೈಪ್ ಕಾರ್ಖಾನೆಯ ಮಾಲೀಕ ಯಶಪಾಲ್ ಸಿಂಗ್ ಹುಂಡೈ ಕ್ರೆಟಾ ಕಾರಿನಲ್ಲಿ ಹೊಸದುರ್ಗದ ಕಡೆಯಿಂದ ವೇಗವಾಗಿ ಬರುತ್ತಿದ್ದರು. ಇದೇ ವೇಳೆ ಹೊಳಲ್ಕೆರೆ ಕಡೆಯಿಂದ ಬರುತ್ತಿದ್ದ ಮತ್ತೊಂದು ಕಾರು ಎನ್.ಜಿ. ಹಳ್ಳಿ ಕಡೆಗೆ ತಿರುವು ತೆಗೆದುಕೊಳ್ಳುತ್ತಿತ್ತು. ಈ ಕಾರನ್ನು ತಪ್ಪಿಸಲು ಹೋಗಿ ಹುಣಸೆ ಮರದ ಕೆಳಗೆ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಮರದ ಕೆಳಗೆ ನಿಂತಿದ್ದವರು ಓಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.