ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ ಪುರಸಭೆ: ಸತತ 4ನೇ ಬಾರಿಯೂ ಸ್ವಚ್ಛತೆ ಗರಿ

Published 6 ಜನವರಿ 2024, 6:23 IST
Last Updated 6 ಜನವರಿ 2024, 6:23 IST
ಅಕ್ಷರ ಗಾತ್ರ

ಹೊಸದುರ್ಗ: ರಾಷ್ಟ್ರ ಮಟ್ಟದ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಗೆ ಹೊಸದುರ್ಗದ ಪುರಸಭೆ ರಾಜ್ಯದಿಂದ ಆಯ್ಕೆಯಾಗಿದೆ. 2019ರಿಂದ ಸತತವಾಗಿ ಈ ಪ್ರಶಸ್ತಿ ದೊರೆತಂತಾಗಿದೆ.

ಸ್ವಚ್ಛತೆ ಬಗ್ಗೆ ಅಧ್ಯಯನ ನಡೆಸಲು ದೆಹಲಿಯಿಂದ ಒಂದು ತಂಡ ಬರುತ್ತದೆ. 3ರಿಂದ 4 ದಿನಗಳ ಕಾಲ ಪಟ್ಟಣದಲ್ಲಿದ್ದು, ಕಸ ವಿಲೇವಾರಿ, ಸ್ವಚ್ಛತೆ ಕುರಿತು ಹಲವು ಅಂಶಗಳನ್ನು ಪರಿಗಣಿಸುವುದರ ಜೊತೆಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಎಲ್ಲ ಅಂಶಗಳಿಗೂ ಅಂಕ ನೀಡಲಾಗುತ್ತದೆ. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವಿಭಾಗಗಳಲ್ಲಿ ಆಯ್ದ ಸ್ಥಳಗಳಿಗೆ ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವಿಭಾಗಗಳಲ್ಲಿ ಹೊಸದುರ್ಗ ಆಯ್ಕೆಯಾಗಿದೆ.

ಈ ಸಾಧನೆಗಾಗಿ ‌ಪುರಸಭೆ ಸಿಬ್ಬಂದಿ, ಸದಸ್ಯರು ಹಾಗೂ ಪೌರಕಾರ್ಮಿಕರ ಕಾರ್ಯವನ್ನು ನಗರದ ಸಾರ್ವಜನಿಕರು ಶ್ಲಾಘಿಸಿದ್ದಾರೆ

ಪಟ್ಟಣದಲ್ಲಿರುವ 23 ವಾರ್ಡ್‌ಗಳಿಂದಲೂ ನಿತ್ಯ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ತಲಾ ಎರಡು ವಾರ್ಡ್‌ಗಳಿಗೆ ಒಂದರಂತೆ ಕಸ ಸಂಗ್ರಹಣೆ ವಾಹನ ಸೌಲಭ್ಯ ನೀಡಲಾಗಿದೆ. 69– 70 ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಗ್ರಹಿಸಿದ ಹಸ ಮತ್ತು ಒಣ ಕಸವನ್ನು  ವಿಂಗಡಿಸಿ, ಹಸಿ ಕಸವನ್ನು ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಾಕಿ, ಅದರಿಂದ ಬಂದ ಗೊಬ್ಬರವನ್ನು ಮಾರಾಟ ಮಾಡಲಾಗುತ್ತಿದೆ. ಒಣ ಕಸವನ್ನು ಮರು ಬಳಕೆ ಮಾಡಬಹುದಾಗಿದ್ದು, ಆಟಿಕೆ, ಟೈರ್ ಸೇರಿದಂತೆ ಹಲವು ವಸ್ತುಗಳನ್ನು ಗುಜರಿಯವರಿಗೆ ಮಾರಾಟ ಮಾಡಲಾಗುತ್ತಿದೆ. ಇದಕ್ಕಾಗಿ ಪಟ್ಟಣದಲ್ಲಿ 5 ಎಕರೆ ಭೂಮಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲಾಗಿದೆ. ಬಂದ ಹಣದಿಂದ ಪ್ರತಿ ತಿಂಗಳು ಪೌರಕಾರ್ಮಿಕರಿಗೆ ಒಂದೊಂದು ಪ್ರಶಸ್ತಿ ನೀಡಲಾಗುತ್ತಿದೆ. ಎಲ್ಲ ಆದಾಯವನ್ನು ಪೌರಕಾರ್ಮಿಕರಿಗೆ ವಿನಿಯೋಗಿಸಲಾಗುತ್ತಿದೆ ಎಂದು ಪುರಸಭೆ ಸದಸ್ಯ ಎಂ.ಶ್ರೀನಿವಾಸ್ ಮಾಹಿತಿ ನೀಡಿದರು.

‘ಪಟ್ಟಣದಲ್ಲಿ 16 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಸ್ವಚ್ಛತೆ ಬಗ್ಗೆ ಪ್ರತಿ ತಿಂಗಳು ಕಾರ್ಯಕ್ರಮ ಆಯೋಜಿಸಿ, ಸದಸ್ಯರ ಸಮ್ಮುಖದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಗೋಡೆಗಳಿಗೆ ಈ ಕುರಿತ ಪೋಸ್ಟರ್ ಸಹ ಅಂಟಿಸಲಾಗಿದೆ. ಹಸಿ ಹಾಗೂ ಒಣ ಕಸ ವಿಂಗಡಣೆಗೆ ರಾಜ್ಯದಾದ್ಯಂತ ಹೊಸದುರ್ಗ ಪುರಸಭೆ ಹೆಸರುವಾಸಿಯಾಗಿದೆ’ ಎಂದು ಅವರು ಹೇಳಿದರು.

ಶುಕ್ರವಾರ ಪ್ರಶಸ್ತಿ ಪ್ರಕಟಿಸಲಾಗಿದೆ. ಜ. 11ರಂದು ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿಯವರು ಪ್ರಶಸ್ತಿ ಪತ್ರ, ಪದಕ ಮತ್ತು ನಗದು ಪ್ರದಾನ ಮಾಡಲಿದ್ದಾರೆ

ಅನುದಾನ ನೀಡಿದರೆ ಮತ್ತಷ್ಟು ಸ್ವಚ್ಛತೆಗೆ ಆದ್ಯತೆ

ಸರ್ಕಾರದಿಂದ ಅನುದಾನ ಬಂದರೆ ಹಲವು ಯೋಜನೆಗಳನ್ನು ರೂಪಿಸಲು ಅನುಕೂಲವಾಗುತ್ತದೆ. ಈಗಾಗಲೇ ಸೋಲಾರ್ ಬಯೋಟೆಕ್ನಿಕಲ್ ಮಿಷನ್‌ಗೆ (ಮಾಲಿನ್ಯ ರಹಿತವಾಗಿ ಪ್ಲಾಸ್ಟಿಕ್ ಸುಡುವುದು) ಬೇಡಿಕೆ ಇಡಲಾಗಿದೆ. ಮುಕ್ತಿಧಾಮದಲ್ಲಿ ಶವಾಗಾರದ ಯಂತ್ರಕ್ಕೂ ಬೇಡಿಕೆ ಇಡಲಾಗಿದೆ. ಸರ್ಕಾರ ಅನುದಾನ ನೀಡಿದರೆ ಮತ್ತಷ್ಟೂ ಸ್ವಚ್ಛತೆಗೆ ಆದ್ಯತೆ ನೀಡಬಹುದು. – ಎಂ. ಶ್ರೀನಿವಾಸ್ ಪುರಸಭೆ ಸದಸ್ಯ

ಈ ಪ್ರಶಸ್ತಿ ಶ್ರೇಯಸ್ಸು ಕ್ಷೇತ್ರದ ಶಾಸಕರು ಜನಪ್ರತಿನಿಧಿಗಳು ಪುರಸಭೆ ಸದಸ್ಯರು ಮುಖ್ಯವಾಗಿ ಪೌರಕಾರ್ಮಿಕರಿಗೆ ಸಲ್ಲುತ್ತದೆ.
ತಿಮ್ಮರಾಜು, ಪುರಸಭೆ ಮುಖ್ಯಾಧಿಕಾರಿ
ಹೊಸದುರ್ಗದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕ
ಹೊಸದುರ್ಗದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕ
ಕಸ ವಿಂಗಡಣೆಯಲ್ಲಿ ತೊಡಗಿರುವ ಪೌರಕಾರ್ಮಿಕರು
ಕಸ ವಿಂಗಡಣೆಯಲ್ಲಿ ತೊಡಗಿರುವ ಪೌರಕಾರ್ಮಿಕರು
ಕಸ ವಿಂಗಡಣೆಯಲ್ಲಿ ತೊಡಗಿರುವ ಪೌರಕಾರ್ಮಿಕರು
ಕಸ ವಿಂಗಡಣೆಯಲ್ಲಿ ತೊಡಗಿರುವ ಪೌರಕಾರ್ಮಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT