ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ₹ 90,000 ಮೌಲ್ಯದ ಚಿನ್ನಾಭರಣ ಕಳವು

Last Updated 12 ಫೆಬ್ರವರಿ 2023, 5:28 IST
ಅಕ್ಷರ ಗಾತ್ರ

ಹೊಸದುರ್ಗ: ಹೊಸದುರ್ಗ ಟೌನ್‌ಪುರದ ರಸ್ತೆಯಲ್ಲಿ ಈಚೆಗೆ ಮನೆಯ ಬೀಗ ಒಡೆದು ಬೀರುವಿನಲ್ಲಿದ್ದ ₹ 90,000 ಮೌಲ್ಯದ 30 ಗ್ರಾಂ ಚಿನ್ನವನ್ನು ಕಳ್ಳರು ದೋಚಿದ್ದಾರೆ.

ಪಟ್ಟಣದ ಅಲಂಕಾರ್ ಬಾರ್‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಅರುಣ್ ಅವರು ಬುಧವಾರ ಮನೆಗೆ ಬೀಗ ಹಾಕಿ ಪತ್ನಿ ಮನೆಗೆ ಹೋಗಿದ್ದರು. ಗುರುವಾರ ಮನೆಗೆ ಬಂದು ನೋಡಿದಾಗ ಬಾಗಿಲು ತೆರೆದಿತ್ತು. ಬೀರುವಿನಲ್ಲಿದ್ದ 25 ಗ್ರಾಂನ ಬಂಗಾರದ ನೆಕ್ಲೆಸ್, 5 ಗ್ರಾಂನ ಬಂಗಾರದ ಓಲೆಯನ್ನು ಕಳ್ಳರು ಕದ್ದಿದ್ದಾರೆ.

ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT