ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ ಮೆರೆದ ಪೊಲೀಸರು

Last Updated 30 ಮಾರ್ಚ್ 2020, 17:22 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಇಲ್ಲಿನ ಪೊಲೀಸರು ಹಸಿವಿನಿಂದ ಕಂಗಾಲಾಗಿದ್ದ ಕೂಲಿ ಕಾರ್ಮಿಕರಿಗೆ ಊಟ ನೀಡಿ, ಊರಿಗೆ ತೆರಳಲು ಸಹಕಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ದಾವಣಗೆರೆ ನಿವಾಸಿಗಳಾದ ರವಿಕುಮಾರ್‌ ಹಾಗೂ ರಾಜಶೇಖರ್‌ ಎಂಬುವರು ಕೂಲಿಯನ್ನು ಅರಸಿ, ಕೆಲವು ತಿಂಗಳ ಹಿಂದೆ ಚಿಕ್ಕಮಗಳೂರಿಗೆ ತೆರಳಿ, ಅಲ್ಲಿ ಕಾಫಿ ತೋಟ
ವೊಂದರಲ್ಲಿ ಕೂಲಿ ಮಾಡಿ
ಕೊಂಡಿದ್ದರು. ಕೊರೊನಾ ಹಿನ್ನೆಲೆಯಲ್ಲಿ ತೋಟಗಳ ಮಾಲೀಕರು ಕೆಲಸ ಬಿಡಿಸಿ ಊರಿಗೆ ಹೋಗುವಂತೆ ತಿಳಿಸಿದ್ದರು. ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಅವರು ನಡೆದುಕೊಂಡು ಊರಿಗೆ ಹೋಗುತ್ತಿದ್ದರು. ಇದನ್ನು ಕಂಡ ಪಿಎಸ್‌ಐ ಮೋಹನ್ ಕುಮಾರ್‌ನಿತ್ರಾಣ ಸ್ಥಿತಿಯ
ಲ್ಲಿದ್ದ ಇಬ್ಬರಿಗೂ ಊಟ ಕೊಡಿಸಿ, ಆರೋಗ್ಯ ತಪಾಸಣೆ ನಡೆಸುವಂತೆ ಸಿಬ್ಬಂದಿಗೆ ಸೂಚಿಸಿದರು ಎಂದು ರಾಜಶೇಖರ್‌ ತಿಳಿಸಿದರು.

ಎಎಸ್‌ಐ ರಮೇಶಾಚಾರ್‌, ಕಾನ್‌ಸ್ಟೆಬಲ್‌ ಬಸವರಾಜ್‌, ಮಂಜುನಾಥ್‌ ಅವರು ಆರೋಗ್ಯ ಪರೀಕ್ಷೆ ನಡೆಸಿ ಅವರನ್ನು ದಾವಣಗೆರೆಗೆ ವಾಹನವೊಂದರಲ್ಲಿ ಕಳುಹಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT