ನಾಯಕನಹಟ್ಟಿ: ‘ಭಾರತೀಯ ವಿಜ್ಞಾನ ಕೇಂದ್ರದೊಂದಿಗೆ (ಐಐಎಸ್ಸಿ) ನೇಪಾಳ ವಿಶ್ವವಿದ್ಯಾಲಯವು ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಮಾನವಿಕ ಶಾಸ್ತ್ರಗಳು ಸೇರಿ ಹೊಸ ತಂತ್ರಜ್ಞಾನ ಆಧಾರಿತ ಶಿಕ್ಷಣ ಕ್ಷೇತ್ರದ ಜ್ಞಾನ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದೆ’ ಎಂದು ಕುದಾಪುರ ಐಐಎಸ್ಸಿ ಕ್ಯಾಂಪಸ್ನ ಮುಖ್ಯಸ್ಥ ಪ್ರೊ.ಬಿ.ಸುಬ್ಬಾರೆಡ್ಡಿ ಹೇಳಿದರು.

ಸಮೀಪದ ಕುದಾಪುರ ಐಐಎಸ್ಸಿ ಕ್ಯಾಂಪಸ್ನ ಪ್ರತಿಭಾನ್ವೇಷಣೆ ಮತ್ತು ಕೌಶಲಾಭಿವೃದ್ಧಿ ಕೇಂದ್ರಕ್ಕೆ ಗುರುವಾರ ನೇಪಾಳ ವಿಶ್ವವಿದ್ಯಾಲಯದ ಕುಲಸಚಿವರು ಮತ್ತು ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳ ನಿಯೋಗ ಭೇಟಿ ನೀಡಿ ಸರ್ಚಿಸಿತು.

‘ನೇಪಾಳದಲ್ಲಿ ಈಗಾಗಲೇ ಹಲವು ವಿಶ್ವವಿದ್ಯಾಲಯಗಳಿದ್ದರೂ ಅಲ್ಲಿನ ಸರ್ಕಾರ 2024ರ ಆಗಸ್ಟ್ನಲ್ಲಿ ಜಾಗತಿಕ ಮಟ್ಟದ ವಿಜ್ಞಾನ, ತಂತ್ರಜ್ಞಾನ, ಸಂಶೋಧನಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಇದಕ್ಕೆ ವಿಶ್ವದ ಉನ್ನತಮಟ್ಟದ ವಿಶ್ವವಿದ್ಯಾಲಯಗಳಾದ ಯುನೈಟೆಡ್ ಕಿಂಗ್ಡಮ್, ಜಪಾನ್, ಬ್ಯಾಂಕಾಕ್ ರಾಷ್ಟ್ರಗಳ ವಿವಿ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಸಹಯೋಗ ಮತ್ತು ಒಡಂಬಡಿಕೆಯನ್ನು ಸಾಧಿಸಿದೆ’ ಎಂದು ಅವರು ತಿಳಿಸಿದರು.

‘ನೇಪಾಳ ವಿಶ್ವವಿದ್ಯಾಲಯಕ್ಕೆ ಮತ್ತು ಅಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕರು, ಸಂಶೋಧಕರಿಗೆ ಐಐಎಸ್ಸಿಯ ಸಹಯೋಗದಲ್ಲಿ ಮೂಲವಿಜ್ಞಾನ, ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ (ಎಐ) ಮಿಷನ್, ನ್ಯಾನೋ ಸೈನ್ಸ್, ಎಂಜಿನಿಯರಿಂಗ್, ಮಾನವಿಕ ಜ್ಞಾನಶಾಖೆಗಳಾದ ಸಂಗೀತ, ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಕೌಶಲ ಅಭಿವೃದ್ಧಿ ಸೇರಿ ಹಲವು ಕ್ಷೇತ್ರಗಳ ಜ್ಞಾನವನ್ನು ಒಗಿಸುವ ಉದ್ದೇಶವನ್ನು ನೇಪಾಳ ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಐಐಎಸ್ಸಿ ಪ್ರಧಾನ ಕಚೇರಿಯಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಗಿದೆ’ ಎಂದು ಮಾಹಿತಿ ನೀಡಿದರು.

‘ಇದಕ್ಕೂ ಮುನ್ನ ಕಳೆದ ಕೆಲತಿಂಗಳ ಹಿಂದೆ ನಮ್ಮ ಐಐಎಸ್ಸಿ ನಿರ್ದೇಶಕರ ನಿಯೋಗವು ನೇಪಾಳದಲ್ಲಿ ಸ್ಥಾಪನೆಯಾಗಿರುವ ನೂತನ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು. ಮುಂದಿನ ದಿನಗಳಲ್ಲಿ ನೇಪಾಳದಿಂದ ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕರು, ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು, ಸಂಶೋಧಕರು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕುದಾಪುರ ಕ್ಯಾಂಪಸ್ಗೆ ಬಂದು ಮೂಲವಿಜ್ಞಾನದ ಕಲಿಕೆ, ತರಬೇತಿ, ಸಂಶೋಧನೆಯಲ್ಲಿ ತೊಡಗಲಿದ್ದಾರೆ’ ಎಂದು ತಿಳಿಸಿದರು.

‘ಇದಕ್ಕಾಗಿ ಇಂದು ನೇಪಾಳ ವಿಶ್ವವಿದ್ಯಾಲಯದ ಕುಲಸಚಿವರಾದ ಸೂರ್ಯರಾಜ್ ಆಚಾರ್ಯ, ಅಲ್ಲಿನ ಶಿಕ್ಷಣ ಇಲಾಖೆಯ ನಿರ್ದೇಶಕ ಕರಣ್ಸಿಂಗ್ ತಗುನ್ನಾ, ಕಾರ್ಯಕಾರಿ ಮಂಡಳಿ ಅಧ್ಯಕ್ಷ ಕೆ.ಸಿ.ಲಾಲ್ಕೃಷ್ಣ ಅವರ ನಿಯೋಗವು ಐಐಎಸ್ಸಿ ಕ್ಯಾಂಪಸ್ನಲ್ಲಿರುವ ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ, ಜೀವವಿಜ್ಞಾನ, ಸೋಲಾರ್ ತಂತ್ರಜ್ಞಾನ, ಆಕಾಶಕಾಯಗಳ ವೀಕ್ಷಣೆ ಪ್ರಯೋಗಾಲಯ, ಹಾಸ್ಟೆಲ್ ಸೇರಿ ಹಲವು ವಿಭಾಗಗಳನ್ನು ಪರಿಶೀಲಿಸಿತು. ಈ ನಿಟ್ಟಿನಲ್ಲಿ ಐಐಎಸ್ಸಿ ಜಾಗತಿಕ ಮಟ್ಟದಲ್ಲಿ ತರಬೇತಿಗಳನ್ನು ಆಯೋಜಿಸಲು ಮುಂದಾಗಿದೆ’ ಎಂದರು.

ಐಐಎಸ್ಸಿ ಬೋಧಕರಾದ ಎಸ್.ಅರವಿಂದ್, ರಾಘವೇಂದ್ರ, ಪ್ರಸನ್ನ, ಆನಂದ್ಕುಮಾರ್ ಸಾಹು, ಮಹಮ್ಮದ್ ಮುಷಫ್, ಪ್ರವೀಣ್ ಶಾನಬೋಗ್, ಕಿಶೋರ್ಕುಮಾರ್, ಎಂಜಿನಿಯರ್ ಹೇಮಂತ್ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.