ಹಿರಿಯೂರು: ರಾಜ್ಯದಲ್ಲಿ ಅನ್ಯಭಾಷಿಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕನ್ನಡಿಗರು ಒಗ್ಗೂಡಿ ಅನ್ಯಭಾಷೆಯ ಹಾವಳಿಯನ್ನು ತಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ತಿಳಿಸಿದರು.

ನಗರದ ನೆಹರು ಮೈದಾನದಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ನಡೆದ ತಾಲ್ಲೂಕು ಮಟ್ಟದ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯಂಮತ್ರಿ ಸಿದ್ದರಾಮಯ್ಯನವರು ಕನ್ನಡ ಭಾಷಾ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ರಾಜ್ಯದಲ್ಲಿ ಆರಂಭವಾಗಿರುವ ವಿದೇಶಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು ಪ್ರಯತ್ನ ನಡೆಸಿದ್ದಾರೆ. ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸಬೇಕು. ಕನ್ನಡ ಮಾಧ್ಯಮಕ್ಕೆ ಆದ್ಯತೆ ನೀಡಬೇಕು ಎಂದರು.

ಕನ್ನಡದ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜನೆ ಮಾಡಿ. ಶೀಘ್ರದಲ್ಲೇ ಕನ್ನಡ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಒಂದು ವರ್ಷದ ಒಳಗೆ ಪೂರ್ಣಗೊಳಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

‘ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಸರ್ಕಾರ ಅಗತ್ಯ ಆರ್ಥಿಕ ನೆರವು ನೀಡಲಿದೆ. ಯೋಜನೆಗೆ 2008ರಲ್ಲಿ ಬಿಎಸ್ವೈ ಸರ್ಕಾರ 500 ಕೋಟಿ ನೀಡಿತ್ತು. ಆದರೆ, 2014 ರಲ್ಲಿ ಸಿದ್ದರಾಮಯ್ಯ 7,500 ಕೋಟಿ ನೀಡಿದ್ದರು. 2018ರ ನಂತರ ನಾಲ್ಕು ವರ್ಷ ಕಾಮಗಾರಿ ಸ್ಥಗಿತಗೊಂಡಿತು. ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದು ವರ್ಷದಿಂದ ಕಾಮಗಾರಿಗೆ ವೇಗ ನೀಡಿದ್ದೇವೆ’ ಎಂದು ಹೇಳಿದರು.

ಜಿಲ್ಲೆಯ ಎಲ್ಲ ಕೆರೆಗಳಿಗೂ ನೀರು ಹರಿಸುವ ಬದ್ಧತೆಯನ್ನು ನಮ್ಮ ಸರ್ಕಾರ ಹೊಂದಿದೆ. ವಿರೋಧಿಗಳ ಟೀಕೆಗೆ ನಾವು ವಿಚಲಿತರಾಗಲ್ಲ. ಮುಂದಿನ ದಿನಗಳಲ್ಲಿ ಭದ್ರೆಗೆ 1,450 ಕೋಟಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇವೆ. ಕೇಂದ್ರ ಸರ್ಕಾರ ನೀಡಿದ್ದ ಭರವಸೆಯಂತೆ 5,300 ಕೋಟಿ ನೀಡಲಿಲ್ಲ. ಆದರೂ ನಾವು ಕಾಮಗಾರಿ ಮುಂದುವರಿಸಿದ್ದೇವೆ. ವಾಣಿವಿಲಾಸ ಅಣೆಕಟ್ಟು ಜಿಲ್ಲೆಯ ಆಸ್ತಿ ಎಂಬುದನ್ನು ಮರೆಯಬಾರದು. ಜಿಲ್ಲೆಯ ಹಾಗೂ ಹಿರಿಯೂರು ಕ್ಷೇತ್ರದ ಜನತೆಯ ಋಣ ತೀರಿಸುತ್ತೇನೆ ಎಂದು ಭರವಸೆ ನೀಡಿದರು.

ಸಮ್ಮೇಳನ ಉದ್ಘಾಟಿಸಿದ ಬಂಡಾಯ ಸಾಹಿತಿ ಕಾಳೇಗೌಡ ನಾಗವಾರ ಮಾತನಾಡಿ, ಹಿರಿಯೂರಿನಲ್ಲಿರುವ ಐತಿಹಾಸಿಕ, ಸಾಂಸ್ಕೃತಿಕ ನೆಲೆಗಳನ್ನು ಉಳಿಸಿ ಬೆಳೆಸಲು ಎಲ್ಲ ಕನ್ನಡ ಮನಸುಗಳು ಮುಂದಾಗಬೇಕು. ನಾವೆಲ್ಲರೂ ಒಗ್ಗೂಡಿ ಕನ್ನಡ ಕಟ್ಟುವ ಕೈಂಕರ್ಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

ನಮ್ಮ ಕಸುಬು, ವಾಸಿಸುವ ಸ್ಥಳ ಯಾವುದೇ ಇರಲಿ ಅಲ್ಲೆಲ್ಲಾ ಕನ್ನಡವನ್ನೇ ಬಳಸೋಣ. ಕನ್ನಡದಲ್ಲಿ ವ್ಯವಹರಿಸೋಣ. ನಮ್ಮ ಮಕ್ಕಳಿಗೂ ಕನ್ನಡ ಕಲಿಸೋಣ. ಆ ಮೂಲಕ ಕನ್ನಡ ಉಳಿಸೋಣ ಎಂದು ಸಮ್ಮೇಳನಾಧ್ಯಕ್ಷ ಎಂ.ಜಿ. ರಂಗಸ್ವಾಮಿ ಮನವಿ ಮಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಬೇಕು. ವಾಣಿವಿಲಾಸ ಅಣೆಕಟ್ಟೆಯ ಕೋಡಿಯನ್ನು ತಗ್ಗಿಸುವ ಪ್ರಯತ್ನಕ್ಕೆ ಕೈಹಾಕದೆ, ಈಗಿರುವ ವಿನ್ಯಾಸವನ್ನೇ ಉಳಿಸಿಕೊಳ್ಳಬೇಕು. ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಿಸುವ ಸಲುವಾಗಿ ವೇದಾವತಿ ಹಾಗೂ ಸುವರ್ಣಮುಖಿ ನದಿಗಳಿಗೆ ಮತ್ತಷ್ಟು ಸ್ಥಳಗಳಲ್ಲಿ ಬ್ಯಾರೇಜ್ ಕಮ್ ಚೆಕ್ ಡ್ಯಾಂ ನಿರ್ಮಿಸಬೇಕು. ನಗರದಲ್ಲಿನ ವಾಹನ ದಟ್ಟಣೆ ತಪ್ಪಿಸಲು ವೇದಾವತಿ ನದಿಯಿಂದ ವೇದಾವತಿ ಕಾಲೇಜಿನವರೆಗೆ ರಸ್ತೆ ವಿಸ್ತರಣೆ ಮಾಡಬೇಕು ಹಾಗೂ ನಗರದ ಮುಖ್ಯ ರಸ್ತೆಗಳ ಬದಿಯಲ್ಲಿ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವಾಣಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಆರ್. ಮಹೇಶ್, ರಾಜ್ಯ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷ ಎಚ್.ಎ. ರುದ್ರಣ್ಣ ಹರ್ತಿಕೋಟೆ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರಪ್ಪ, ತಹಶೀಲ್ದಾರ್ ಎಂ. ಸಿದ್ದೇಶ್, ನಗರಸಭೆ ಪೌರಾಯುಕ್ತ ವಾಸೀಂ, ತಾಲ್ಲೂಕು ಪಂಚಾಯಿತಿ ಇಒ ಪ್ರಮೋದ್, ಬಿಇಒ ಸಿ.ಎಂ. ತಿಪ್ಪೇಸ್ವಾಮಿ, ಮಹಮದ್ ಫಕ್ರುದ್ದೀನ್, ಖಾದಿ ರಮೇಶ್, ಶಶಿಕಲಾ ರವಿಶಂಕರ್, ಸೀತಮ್ಮ ಎಚ್.ವಿ. ಶ್ರೀನಿವಾಸ್, ಶಿವರಂಜನಿ, ಜಿ. ಪ್ರೇಮ್ ಕುಮಾರ್, ಕಂದಿಕೆರೆ ಸುರೇಶ್ ಬಾಬು, ಪ್ರಸನ್ನ, ಗೀತಾ ನಾಗಕುಮಾರ್, ಜಿ.ಎಲ್.ಮೂರ್ತಿ, ಅಸ್ಗರ್ ಅಹಮದ್,ಆಲೂರು ಹನುಮಂತರಾಯಪ್ಪ, ಸತೀಶ್ ಬಾಬು, ಸಣ್ಣಪ್ಪ, ರಾಮಕೃಷ್ಣಪ್ಪ ಪಾಲ್ಗೊಂಡಿದ್ದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಗರದ ತೇರುಮಲ್ಲೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಮುಂಭಾಗದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ತಹಶೀಲ್ದಾರ್ ಎಂ. ಸಿದ್ದೇಶ್ ಉದ್ಘಾಟಿಸಿದರು. ಸರ್ವಾಲಂಕೃತ ರಥದಲ್ಲಿ ಸಮ್ಮೇಳನಾಧ್ಯಕ್ಷ ಎಂ.ಜಿ. ರಂಗಸ್ವಾಮಿ ಹಾಗು ಪತ್ನಿ ಕವಿತಾ ಕುಳಿತಿದ್ದರು. ತೇರುಮಲ್ಲೇಶ್ವರ ದೇವಸ್ಥಾನದಿಂದ ನೆಹರು ವೃತ್ತ ಗಾಂಧಿ ವೃತ್ತ ಹುಳಿಯಾರು ರಸ್ತೆ ಚರ್ಚ್ ರಸ್ತೆ ಸರ್ಕಾರಿ ಆಸ್ಪತ್ರೆ ಪ್ರಧಾನ ರಸ್ತೆಯ ಮೂಲಕ ಮೆರವಣಿಗೆ ಕಾರ್ಯಕ್ರಮದ ನೆಹರು ಮೈದಾನ ತಲುಪಿತು. ಡಿವೈಎಸ್ಪಿ ಶಿವಕುಮಾರ್ ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ ಸಮಾಜ ಕಲ್ಯಾಣ ಇಲಾಖೆಯ ದಿನೇಶ್ ಸಿಡಿಪಿಒ ರಾಘವೇಂದ್ರ ನಗರಸಭೆ ಪೌರಾಯುಕ್ತ ಎ. ವಾಸೀಂ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಚಂದ್ರಪ್ಪ ಪ್ರೇಮ್ ಕುಮಾರ್ ಮಹಮದ್ ಫಕ್ರುದ್ದೀನ್ ರಂಗಸ್ವಾಮಿ ಸಕ್ಕರ ಮಹಾಸ್ವಾಮಿ ಚಮನ್ ಷರೀಫ್ ಮೆರವಣಿಗೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.