ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ನಾಮಪತ್ರ ಸಲ್ಲಿಕೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ
Last Updated 7 ಏಪ್ರಿಲ್ 2021, 17:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಬುಧವಾರ ಕೊನೆಗೊಂಡಿದ್ದು 13 ಆಕಾಂಕ್ಷಿಗಳು 15 ನಾಮಪತ್ರ ಸಲ್ಲಿಸಿದ್ದಾರೆ.

ಚಿತ್ರದುರ್ಗ ತಹಶೀಲ್ದಾರ್‌ ವೆಂಕಟೇಶಯ್ಯ ಅವರಿಗೆ ನಾಮಪತ್ರ ಸಲ್ಲಿಸಲಾಗಿದೆ. ನಾಮಪತ್ರ ಸಲ್ಲಿಕೆ ಮಾರ್ಚ್‌ 29ರಿಂದ ಆರಂಭವಾಗಿತ್ತು. ಏ.8ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಏ.12ರಂದು ಮಧ್ಯಾಹ್ನ 3ಗಂಟೆಯವರೆಗೆ ಕಾಲಾಕಾಶವಿದೆ.

ಜೆ.ತಿಪ್ಪೇಸ್ವಾಮಿ, ಆರ್‌.ಶೇಷಣ್ಣಕುಮಾರ್‌, ಕೆ.ಎಂ.ಶಿವಸ್ವಾಮಿ, ದೊಡ್ಡಮಲ್ಲಯ್ಯ, ಚಕ್ಕಪ್ಪನಹಳ್ಳಿ ಷಣ್ಮುಖ, ಡಿ.ಓ.ಮುರಾರ್ಜಿ, ರಾ.ಸು.ತಿಮ್ಮಯ್ಯ ಗೌಡಿಹಳ್ಳಿ, ಕೆ.ಪಿ.ಎಂ.ಗಣೇಶಯ್ಯ, ಮಾಲತೇಶ್‌ ಅರಸ್‌ ಹರ್ತಿಕೋಟೆ, ಆರ್‌.ಮಲ್ಲಿಕಾರ್ಜುನಯ್ಯ, ಸಿ.ಆರ್‌.ಮೂರ್ತಿ, ನಿರಂಜನ ದೇವರಮನೆ ಹಾಗೂ ನ.ಕೆಂಚವೀರಪ್ಪ ಎಂಬುವರು ನಾಮಪತ್ರ ಸಲ್ಲಿಸಿದ್ದಾರೆ. ಆರ್‌.ಶೇಷಣ್ಣಕುಮಾರ್‌ ಹಾಗೂ ದೊಡ್ಡಮಲ್ಲಯ್ಯ ಎರಡು ನಾಮಪತ್ರ ನೀಡಿದ್ದಾರೆ.

ಮೇ 9ರಂದು ಮತದಾನ ನಡೆಯಲಿದ್ದು, ಮೇ 12ರಂದು ಫಲಿತಾಂಶ ಹೊರಬೀಳಲಿದೆ. ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆ ದಿನ ಕಳೆದಂತೆ ರಂಗು ಪಡೆಯುತ್ತಿದೆ. ಅಧ್ಯಕ್ಷ ಗಾದಿಯ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಸಾಹಿತ್ಯ ಕಾರ್ಯಕ್ರಮಗಳ ಸಂಘಟಕರು, ಪತ್ರಕರ್ತರು, ವೈದ್ಯರು, ಕಲಾವಿದರು, ನಿವೃತ್ತ ಉಪನ್ಯಾಸಕರು ಸೇರಿ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು ಆಯ್ಕೆ ಬಯಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT