ಸೋಮವಾರ, ಮಾರ್ಚ್ 27, 2023
22 °C

ಚಿತ್ರದುರ್ಗ: ಶಾಸಕರ ವಿರುದ್ಧ ‘ಮಗ್ಗಲು ಮುಳ್ಳು’ ಭಿತ್ತಿಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರಿಗೆ ‘ಮಗ್ಗಲು ಮುಳ್ಳು’ ಬಿರುದು ನೀಡಲಾಗಿದೆ ಎಂಬ ಭಿತ್ತಿಪತ್ರ ನಗರದ ಹಲವೆಡೆ ಕಾಣಿಸಿಕೊಂಡಿದೆ. ಅಪರಿಚಿತರು ಅಂಟಿಸಿದ ಈ ಭಿತ್ತಿಪತ್ರದಲ್ಲಿ ಶಾಸಕರ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿದೆ.

ಭಿತ್ತಿಪತ್ರದಲ್ಲಿ ಎಂ.ಕೆ.ಹಟ್ಟಿಯ ನೊಂದ ಗ್ರಾಮಸ್ಥರು, ಅನ್ಯಾಯಕ್ಕೆ ಒಳಗಾದವರು ಎಂಬ ವಿವರವಿದೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಸೇರಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಈ ಭಿತ್ತಿಪತ್ರವನ್ನು ನಗರದ ಹಲವೆಡೆ ಅಂಟಿಸಲಾಗಿದೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ಆಹಾರದ ಕಿಟ್‌ ಕೇಳಲು ಮನೆ ಬಳಿಗೆ ಬಂದಿದ್ದ ಗ್ರಾಮದ ಮಹಿಳೆಯರನ್ನು ಗದರಿಸಿ ಅವಮಾನಿಸಿದ ಪರಿಣಾಮವಾಗಿ ಈ ಬಿರುದು ನೀಡುತ್ತಿದ್ದೇವೆ’ ಎಂಬ ಒಕ್ಕಣೆ ಭಿತ್ತಿಪತ್ರದಲ್ಲಿದೆ. ಎಂ.ಕೆ.ಹಟ್ಟಿ ಹೆದ್ದಾರಿ ಕೆಳ ಸೇತುವೆಯಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಒದಗಿಸದಿರುವುದು, ಯುವಕರು ಹಾಗೂ ಮಹಿಳೆಯರ ಬಗ್ಗೆ ಆಡಿದ ಮಾತು ಹಾಗೂ ಗ್ರಾಮಕ್ಕೆ ಮೂರು ವರ್ಷಗಳಿಂದ ಅನುದಾನ ನೀಡಿಲ್ಲ ಎಂಬ ಅಂಶಗಳನ್ನು ಉಲ್ಲೇಖಿಸಲಾಗಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು