ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗಮ–ಮಂಡಳಿಗೆ ನೇಮಕ: ಸಂಭ್ರಮಾಚರಣೆ

Published 29 ಫೆಬ್ರುವರಿ 2024, 16:20 IST
Last Updated 29 ಫೆಬ್ರುವರಿ 2024, 16:20 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ಕಾಂಗ್ರೆಸ್‌ ಮುಖಂಡರಾದ ಬಿ. ಯೋಗೇಶ್‌ ಬಾಬು ಮತ್ತು ಮುಂಡ್ರಗಿ ನಾಗರಾಜ್ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ
ದೊರತಿರುವ ಕಾರಣ ಕಾಂಗ್ರೆಸ್‌ ಕಾರ್ಯಕರ್ತರು ಇಲ್ಲಿ ಗುರುವಾರ ಸಂಭ್ರಮಾಚರಣೆ ನಡೆಸಿದರು.

ಬಿ.ಜಿ.ಕೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಾಜಿ ಸದಸ್ಯ ಬಿ. ಯೋಗೇಶ್‌ ಬಾಬು ಅವರಿಗೆ ‘ಕರ್ನಾಟಕ ದ್ರಾಕ್ಷಾರಸ ಮಂಡಳಿ’ ಅಧ್ಯಕ್ಷ ಸ್ಥಾನ ಮತ್ತು ಹಾನಗಲ್‌ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಾಜಿ ಸದಸ್ಯ ಮುಂಡ್ರಗಿ ನಾಗರಾಜ್‌ ಅವರಿಗೆ ‘ಬಾಬು ಜಗಜೀವನ್‌ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ’( ಲಿಡ್ಕರ್)‌ನ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದೇ ಮೊದಲ ಸಲ ತಾಲ್ಲೂಕಿನವರಿಗೆ ನಿಗಮ, ಮಂಡಳಿಗಳಲ್ಲಿ ಸ್ಥಾನಮಾನ ಸಿಕ್ಕಿದೆ ಎಂದು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.

ಹಲವು ವರ್ಷಗಳಿಂದ ಪಕ್ಷಕ್ಕೆ ನಿಷ್ಠರಾಗಿ ದುಡಿದ ಕಾರ್ಯಕರ್ತರನ್ನು ಪಕ್ಷ ಕೈಬಿಡುವುದಿಲ್ಲ ಎನ್ನುವುದಕ್ಕೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಪಕ್ಷ ಬದ್ಧವಾಗಿರುವುದಕ್ಕೆ ಈ ಇಬ್ಬರ ಆಯ್ಕೆ ಸಾಕ್ಷಿಯಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಮುಖಂಡರಾದ ಪಿ.ಎನ್.‌ ಶ್ರೀನಿವಾಸುಲು, ಜಿ.ಎನ್‌. ಜಗದೀಶ್‌ ಅಭಿಪ್ರಾಯಪಟ್ಟರು.

ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿದರು. ಮುಖಂಡರಾದ ಬಡೋಬನಾಯಕ, ಪಿ.ಆರ್.‌ ಕಾಂತರಾಜ್‌, ಕೊರಿಯರ್‌ ಭೀಮಣ್ಣ, ಕಿರಣ್‌ ವಾಂಜ್ರೆ, ಶಿವು, ಎಂ. ರಾಮು, ಅರುಣಾ, ಶರತ್‌, ಎ.ಕೆ. ಮಂಜುನಾಥ್‌, ಮುಜಾಮಿಲ್‌, ರಾಂಪುರ ತಿಪ್ಪೇಶ್‌, ನಾಗಸಮುದ್ರ ಮಲ್ಲಿಕಾರ್ಜುನ್‌, ಬಂಗಿ ತಿಪ್ಪಯ್ಯ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT