ಗುರುವಾರ , ಏಪ್ರಿಲ್ 22, 2021
29 °C

ಚಿರತೆ ಪತ್ತೆ: ರೈತರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಜಾಜೂರು: ಇಲ್ಲಿನ ತೋಟವೊಂದರಲ್ಲಿ ಭಾನುವಾರ ಮಧ್ಯಾಹ್ನ ಚಿರತೆ ಕಾಣಿಸಿಕೊಂಡಿದ್ದು, ರೈತರು ಆತಂಕಗೊಂಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮದ ಕಡೂರು ರಸ್ತೆಯ ತೋಟವೊಂದರಲ್ಲಿ ರೈತರು ಕೆಲಸ ಮಾಡುತ್ತಿದ್ದಾ‌ಗ, ಕೃಷಿ ಹೊಂಡದ ದಡದಲ್ಲಿ ಹಾಕಲಾಗಿದ್ದ ತಾಡಪಾಲಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ರೈತರು ವಲಯ ಅರಣ್ಯಾಧಿಕಾರಿಗೆ ಮಾಹಿತಿ ನೀಡಿದರು.

ಉಪ ವಲಯ ಅರಣ್ಯಾಧಿಕಾರಿ ಇದಾಯತ್ ‌ಸಿಬ್ಬಂದಿಯೊಂದಿಗೆ ಬರುವ ವೇಳೆಗೆ ಚಿರತೆ ಅಲ್ಲಿಂದ
ಹೋಗಿತ್ತು.

ರೈತರು ಮೊಬೈಲ್‌ನಲ್ಲಿ ಚಿರತೆ ಫೋಟೋ ತೆಗೆದಿದ್ದಾರೆ. ಚಿತ್ರವನ್ನು ನೋಡಿದ ಅಧಿಕಾರಿಗಳು ಇದು ಪುನುಗು ಬೆಕ್ಕು (ಸಿವೆಟ್‌ಕ್ಯಾಟ್) ಆಗಿರುವ ಸಾಧ್ಯತೆ ಇದೆ. ಆದರೂ ರೈತರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದರು.

ನಾಲ್ಕೈದು ದಿನಗಳ ಹಿಂದೆ ಸಮೀಪದ ಹೊನ್ನಕಾಲುವೆ ಗ್ರ್ರಾಮದಲ್ಲಿ ಚಿರತೆಯೊಂದು ಹಸುವಿನ ಕರುವೊಂದನ್ನು ಹಿಡಿದುಕೊಂಡು ಹೋಗಿತ್ತು. ಚಿಕ್ಕಎಮ್ಮಿಗನೂರು, ಕಡೂರು, ಹೊನ್ನಕಾಲುವೆ ಸುತ್ತಲಿನ ಪ್ರದೇಶಗಳಲ್ಲಿ ಚಿರತೆ ಇರುವ ಮಾಹಿತಿ ಇದ್ದು, ಚಿಕ್ಕಎಮ್ಮಿಗನೂರು ಕಾವಲಿನಲ್ಲಿ ಬೋನು ಇಡಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಇದಾಯತ್ ‌ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.