ಚಿತ್ರದುರ್ಗ: ‘ಇಲ್ಲಿ ಯಾರು ನಾಯಕರಲ್ಲ. ನಮ್ಮ ನಾಯಕ ಬಸವಣ್ಣನವರೇ ಆಗಿದ್ದಾರೆ. ನಾವು ಅವರ ಅನುಯಾಯಿಗಳು. ಇಲ್ಲಿ ನಾವು ಸಾಮಾನ್ಯರಾಗಿ ಕೆಲಸ ಮಾಡಬೇಕಿದೆ’ ಎಂದು ಸಾಣೇಹಳ್ಳಿಯ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಮುರುಘಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಸಾಂಸ್ಕೃತಿಕ ಅಭಿಯಾನ ಸಭೆಯಲ್ಲಿ ಮಾತನಾಡಿದ ಅವರು,‘ಬಸವ ಸಾಂಸ್ಕೃತಿಕ ಅಭಿಯಾನ ನಡೆಸುವ ಉದ್ದೇಶದಿಂದ ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ ರಚನೆ ಮಾಡಿಕೊಂಡು ಸಭೆಗಳನ್ನು ಈಗಾಗಲೇ ನಡೆಸಲಾಗಿದೆ. ಇಲ್ಲಿ ಯಾವುದೇ ಕುರ್ಚಿ ಆಮಿಷಗಳು ಬರುವುದು ಬೇಡ. ಸ್ಥಾನಮಾನಕ್ಕಿಂತ ಸಂಘಟನೆ ಮುಖ್ಯ’ ಎಂದರು.

‘ಜಾತಿ ಸಂಘರ್ಷವಿಲ್ಲದೆ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ. ಲಿಂಗಾಯತ ಎನ್ನುವುದು ಜಾತಿಯಲ್ಲ. ಅದೊಂದು ತತ್ತ್ವ ಸಿದ್ಧಾಂತ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಆಡಂಬರದ ಕಾರ್ಯಕ್ರಮಕ್ಕಿಂತ ದೇಸಿಯ ಜಾನಪದ ಕಲಾತಂಡಗಳ ಪ್ರದರ್ಶನಗಳಿರಬೇಕು. ಹಣವಂತರಿಗಿಂತ ಗುಣವಂತರ ಸಂಖ್ಯೆ ಹೆಚ್ಚಾಗಬೇಕು. ಒಟ್ಟಾರೆ ಎಲ್ಲಾ ರೀತಿಯಿಂದ ಎಲ್ಲರೂ ಸೇರಿ ಒಳ್ಳೆಯ ಸಂದೇಶ ರವಾನೆಯಾಗುವ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರೂ ಸಹಕಾರ ನೀಡಬೇಕು’ ಎಂದು ತಿಳಿಸಿದರು.

‘ಜಗತ್ತಿಗೆ ಉದಾತ್ತ ತತ್ತ್ವ ನೀಡಿದ ಬಸವಣ್ಣನವರು ಕೇವಲ ಕರ್ನಾಟಕಕ್ಕೆ ಸಾಂಸ್ಕೃತಿಕ ನಾಯಕನಾಗುವುದಕ್ಕಿಂತ ದೇಶದ ಸಾಂಸ್ಕೃತಿಕ ನಾಯಕರಾದರೆ ಅದಕ್ಕೊಂದು ಅರ್ಥ ಬರುತ್ತದೆ. ಸಂವಿಧಾನದ ವಿಚಾರಗಳನ್ನು ಅಂದು ಅನುಭವ ಮಂಟಪದಲ್ಲಿ ಜಾರಿಗೆ ತಂದರು. ಆ ಹಿನ್ನಲೆಯಲ್ಲಿ ಬಸವ ಸಾಂಸ್ಕೃತಿಕ ಅಭಿಯಾನ ಏರ್ಪಟ್ಟಿದೆ. ಚಿತ್ರದುರ್ಗದಲ್ಲಿ ನಾವು ನೀವೆಲ್ಲರೂ ಸೇರಿ ಯಶಸ್ವಿಯಾಗಿ ನಡೆಸಿಕೊಡಬೇಕಾಗಿದೆ’ ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವ ಕುಮಾರ ಸ್ವಾಮೀಜಿ ಮನವಿ ಮಾಡಿದರು.

‘ಬಸವ ಸಾಂಸ್ಕೃತಿಕ ಅಭಿಯಾನ ಒಂದು ಒಳ್ಳೆಯ ಪರಿಕಲ್ಪನೆಯ ಕಾರ್ಯಕ್ರಮ. ಇದರಲ್ಲಿ ಎಲ್ಲರೂ ಭಾಗವಹಿಸಬೇಕಿದೆ. ನಾನು ವಿಧಾನ ಪರಿಷತ್ ಸದಸ್ಯನಾಗಿ ಎನ್ನುವದಕ್ಕಿಂತ ಒಬ್ಬ ಬಸವ ಅನುಯಾಯಿಯಾಗಿ ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತೇನೆ. ಬೆಂಗಳೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭವನ್ನೂ ಸಹ ಯಶಸ್ವಿಗೊಳಿಸೋಣ’ ಎಂದು ವಿಧಾನ ಪರಿಷತ್ ಕೆ.ಎಸ್. ನವೀನ್ ತಿಳಿಸಿದರು.

ಸಭೆಯಲ್ಲಿ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಹನುಮಲಿ ಷಣ್ಮುಖಪ್ಪ, ಗೌರವ ಕಾರ್ಯದರ್ಶಿಯಾಗಿ ಶಾಸಕ ಕೆ.ಸಿ. ವೀರೇಂದ್ರ, ಗೌರವ ಉಪಾಧ್ಯಕ್ಷರಾಗಿ ಜಿ.ಎಂ. ಅನಿತ್ ಕುಮಾರ್, ಕೆ.ಎಸ್. ನವೀನ್ ಹಾಗೂ ಖಜಾಂಚಿಯಾಗಿ ಕೆ.ಎಂ. ವೀರೇಶ್ ಅವರನ್ನು ನೇಮಕ ಮಾಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ, ಅಖಿಲ ಭಾರತೀಯ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಪ್ಪ, ವೀರಶೈವ ಸಮಾಜದ ಕಾರ್ಯದರ್ಶಿ ವೀರೇಂದ್ರ ಕುಮಾರ್, ಖಜಾಂಚಿ ತಿಪ್ಪೇಸ್ವಾಮಿ, ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಕೆಂಚವೀರಪ್ಪ, ಮುಖಂಡರಾದ ಕೆ.ಸಿ. ನಾಗರಾಜ್, ನಾಗರಾಜ್ ಸಂಗಮ್ ಇದ್ದರು.

ಬಸವಣ್ಣನವರು ಹೇಗೆ ಸರ್ವ ಸಮಾಜದವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೋ ಅದೇ ರೀತಿ ಎಲ್ಲಾ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಚಿಂತನೆ ಸಂವಾದ ಜನಜಾಗೃತಿ ಬಸವ ಸಾಂಸ್ಕೃತಿಕ ಅಭಿಯಾನದಲ್ಲಿನಡೆಯಬೇಕು
ಬಸವ ಕುಮಾರ ಸ್ವಾಮೀಜಿ, ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.