ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸದುರ್ಗ: ವೇತನ ಹೆಚ್ಚಳಕ್ಕೆ ಬಿಸಿಯೂಟ ತಯಾರಕರ ಮನವಿ

Published : 22 ಸೆಪ್ಟೆಂಬರ್ 2024, 14:14 IST
Last Updated : 22 ಸೆಪ್ಟೆಂಬರ್ 2024, 14:14 IST
ಫಾಲೋ ಮಾಡಿ
Comments

ಹೊಸದುರ್ಗ: ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಮತ್ತು ಎಐಟಿಯುಸಿ ಸದಸ್ಯರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

‘₹21,000 ಕನಿಷ್ಟ ವೇತನ, ಕೆಲಸದ ಭದ್ರತೆ, ತಮಿಳುನಾಡು ಮಾದರಿಯಲ್ಲಿ ವಿವಿಧ ಸೌಲಭ್ಯ, ಮಾಸಿಕ ₹3,000 ನಿವೃತ್ತಿ ವೇತನ, ಪ್ರತಿ ವರ್ಷ ಸಮವಸ್ತ್ರ, ದಸರಾ ರಜೆ, ಬೇಸಿಗೆ ರಜೆಯಲ್ಲಿ ವೇತನ ಪಾವತಿ, ಬಿಸಿಯೂಟ ತಯಾರಕರು ನಿಧನರಾದಲ್ಲಿ ₹2 ಲಕ್ಷ ಪರಿಹಾರ, ಅಂತ್ಯಕ್ರಿಯೆಗೆ ₹20,000 ನೀಡಬೇಕು’ ಎಂಬುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ. 

ಎಐಟಿಯುಸಿ ಅಧ್ಯಕ್ಷ ಕುಮಾರಸ್ವಾಮಿ ಎನ್.ಸಿ, ಶಿವಮ್ಮ, ಕಾರ್ಯದರ್ಶಿ ವಸಂತಬಾಯಿ, ಬಿಸಿಯೂಟ ಮುಖ್ಯ ಅಡುಗೆಯವರು ಮತ್ತು ಸಹಾಯಕಿಯರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT