ಮೊಳಕಾಲ್ಮುರು: ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳದ ಒತ್ತಡವನ್ನು ತಡೆಯಲು ನಮ್ಮ ಕ್ಲಿನಿಕ್ಗಳನ್ನು ತೆರೆಯಲಾಗಿದ್ದು, ಸ್ಥಳೀಯರು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಕುಮಾರ್ ಮನವಿ ಮಾಡಿದರು.

ಪಟ್ಟಣದ ಭಾಗ್ಯಜ್ಯೋತಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಕ್ಲಿನಿಕ್ ಆರಂಭವಾಗಿ ಒಂದು ವರ್ಷ ಪೂರೈಸಿರುವ ಕಾರಣ ಶುಕ್ರವಾರ ಆರೋಗ್ಯ ಇಲಾಖೆ ಆಯೋಜಿಸಿದ್ದ ಆರೋಗ್ಯ ಮೇಳದಲ್ಲಿ ಅವರು
ಮಾತನಾಡಿದರು.

‘ನಮ್ಮ ಕ್ಲಿನಿಕ್ನಲ್ಲಿ ರಕ್ತಪರೀಕ್ಷೆ, ಆರೋಗ್ಯ ತಪಾಸಣೆ, ಮಧುಮೇಹ ಪರೀಕ್ಷೆ ಸೇರಿ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯವಾಗಿ ತುರ್ತು ಚಿಕಿತ್ಸೆ ಸಿಗಲಿ ಎನ್ನುವುದು ಇದರ ಮೂಲ ಉದ್ದೇಶವಾಗಿದೆ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಪ್ರಚುರಪಡಿಸುವ ಮೂಲಕ ಹೆಚ್ಚು ಜನರಿಗೆ ಸೌಲಭ್ಯ ಸಿಗುವಂತೆ ಮಾಡಬೇಕು’ ಎಂದು ಹೇಳಿದರು.

ಕಾರ್ಯಕ್ರಮವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಸಿದ್ದಣ್ಣ ಉದ್ಘಾಟಿಸಿದರು. ಆಡಳಿತಾಧಿಕಾರಿ ಡಾ.ಮಂಜುನಾಥ್, ತಜ್ಞ ವೈದ್ಯರಾದ ಡಾ.ಸುಧೀಂದ್ರಬಾಬು, ಡಾ.ಗಿರೀಶ್, ಡಾ.ಗೀತಾ, ಡಾ.ಅಬ್ದುಲ್ಲಾ, ಹಿರಿಯ ಆರೋಗ್ಯ ಸಹಾಯಕಿ ಮಾರುತಮ್ಮ, ಆಶಾ ಮೆಂಟರ್ ರಾಧಮ್ಮ, ಸಿಎಚ್ಒ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.