ಮೊಳಕಾಲ್ಮುರು: ಪ್ರತಿವರ್ಷದಂತೆ ಈ ವರ್ಷವೂ ಬಸವ ಜಯಂತಿ ಅಂಗವಾಗಿ ಏ. 20 ರಂದು ಸಮೀಪದ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಸಿದ್ದಯ್ಯನಕೋಟೆ ಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದರು.

ಕಲಾವಿದರ ಕಲ್ಯಾಣ ವೇದಿಕೆ, ವಿಷ್ಣುಸೇನಾ ಸಮಿತಿ, ಗಂಧರ್ವ ಸಂಸ್ಥೆ, ಗಂಗೋತ್ರಿ ಚಾರಿಟಬಲ್ ಟ್ರಸ್ಟ್, ಪರ್ವ ಚಾರಿಟಬಲ್ ಟ್ರಸ್ಟ್ ಸಂಯುಕ್ತವಾಗಿ ಕಾರ್ಯಕ್ರಮ ಆಯೋಜನೆ ಮಾಡಿವೆ. ಹೆಚ್ಚುತ್ತಿರುವ ವೆಚ್ಚದ ದಿನಗಳಲ್ಲಿ ಪೋಷಕರು ಮಕ್ಕಳ ಮದುವೆಗಳನ್ನು ಸರಳವಾಗಿ ಮಾಡಲು ಮುಂದಾಗಬೇಕಿದೆ. ಇದಕ್ಕೆ ಸಾಮೂಹಿಕ ವಿವಾಹ ಸೂಕ್ತ ವೇದಿಕೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್ ಟಿ. ಜಗದೀಶ್, ಪಿಎಸ್ಐ ಮಹೇಶ್ ಹೊಸಪೇಟೆ, ಮುಖಂಡರಾದ ಜಿ. ಶ್ರೀನಿವಾಸಮೂರ್ತಿ, ಕರಿಬಸಪ್ಪ, ಜನಸಂಸ್ಥಾನ ವಿರೂಪಾಕ್ಷಪ್ಪ, ಪಿ.ಆರ್. ಕಾಂತರಾಜ್, ಸಿದ್ಧಾರ್ಥ್, ಹಾನಗಲ್ ತಿಪ್ಪೇಸ್ವಾಮಿ, ವಡೇರಹಳ್ಳಿ ಬಸವರಾಜ್ ಇದ್ದರು.

ನೋಂದಣಿ ಮಾಡಿಸಲು ಬಯಸುವ ಆಸಕ್ತರು ಮೊ.ಸಂ: 9880777629ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.