ಭಾನುವಾರ, ನವೆಂಬರ್ 29, 2020
22 °C

ವಿಷಪೂರಿತ ಮೇವು ತಿಂದು 40ಕ್ಕೂ ಹೆಚ್ಚು ಕುರಿಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ತಾಲ್ಲೂಕಿನ ಸರಸ್ವತಿಹಟ್ಟಿಯ ಹೊಸಹಟ್ಟಿಯಲ್ಲಿ ಗುರುವಾರ ವಿಷಪೂರಿತ ಮೇವು ತಿಂದು 40ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

ಚಿತ್ತಪ್ಪ, ಕೆಂಚಪ್ಪ ಮತ್ತು ಶಿವಮ್ಮ ಎಂಬುವವರ ಸುಮಾರು 300 ಕುರಿಗಳು ವಿಷಪೂರಿತ ಮೇವು ತಿಂದಿವೆ. ಸುಮಾರು 258 ಕುರಿಗಳನ್ನು ಬದುಕಿಸುವಲ್ಲಿ ಪಶುವೈದ್ಯರು ಯಶಸ್ವಿಯಾಗಿದ್ದಾರೆ. ಇನ್ನೂ 25ಕ್ಕೂ ಹೆಚ್ಚು ಕುರಿಗಳ ಸ್ಥಿತಿ ಗಂಭೀರವಾಗಿದೆ.

ತಹಶೀಲ್ದಾರ್ ಸತ್ಯನಾರಾಯಣ, ಸಿಪಿಐ ರಾಘವೇಂದ್ರ, ಗ್ರಾಮಾಂತರ ಠಾಣೆ ಎಸ್ಐ ಪರಮೇಶ್ ನೇತೃತ್ವದಲ್ಲಿ ಪಶು ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತು.

‘ಬಿಳಿ ಜೋಳದ ಮೇವಿನ ಚಿಗುರು ತಿಂದು ಕುರಿಗಳು ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದಿದ್ದು, ಸಂತ್ರಸ್ತ ಕುರಿಗಾಯಿಗಳಿಗೆ ನೆರವು ನೀಡಲಾಗುವುದು. ಸರ್ಕಾರದಿಂದಲೂ ಪರಿಹಾರ ಕೊಡಿಸಲಾಗುವುದು’ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು