ಹೊಸದುರ್ಗ: ತಾಲ್ಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ತೋಟದ ರಕ್ಷಣೆಗಾಗಿ ಸಾಕಿದ್ದ ಮುಧೋಳ ತಳಿಯ ನಾಯಿ ದುಷ್ಕರ್ಮಿಗಳು ಇಟ್ಟಿದ್ದ ಸ್ಫೋಟಕ ಸೇವಿಸಿ ಸಾವನ್ನಪ್ಪಿದೆ.

ಅತ್ತಿಘಟ್ಟ ಗ್ರಾಮದ ನಿವಾಸಿ ಯೋಗೇಶ್ ಫೆ. 17 ರಂದು ಸಂಜೆ ತಮ್ಮ ನಾಯಿಗಳಿಗೆ ಆಹಾರ ಹಾಕಿ ಮನೆಗೆ ಮರಳಿದ್ದರು. ಆದರೆ, ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಮುಧೋಳ ನಾಯಿ ನಾಪತ್ತೆಯಾಗಿತ್ತು. ಫೆ. 20 ರಂದು ಸಂಜೆ ತೋಟಕ್ಕೆ ನೀರು ಹರಿಸಲು ಹೋದಾಗ ಕಾಣೆಯಾಗಿದ್ದ ನಾಯಿ ಮೃತಪಟ್ಟಿತ್ತು.

ಸ್ಫೋಟಕ ವಸ್ತುವನ್ನು ಕಚ್ಚಿದ್ದು, ಸ್ಫೋಟಕವು ಬಾಯಲ್ಲೇ ಸಿಡಿದ ಪರಿಣಾಮ ನಾಯಿಯ ಬಾಯಿ ಹರಿದು ಹೋಗಿ ಸ್ಥಳದಲ್ಲೇ ಮೃತಪಟ್ಟಿದೆ. ಕಾಡು ಪ್ರಾಣಿಗಳ ಬೇಟೆಗಾಗಿ ದುಷ್ಕರ್ಮಿಗಳು ಇಟ್ಟಿದ್ದ ಸ್ಫೋಟಕವನ್ನು ನಾಯಿ ತಿಂದಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.